ನಾಟಿಂಗ್ಹ್ಯಾಮ್: ಟೀಂ ಇಂಡಿಯಾದ ಯುವ ಕ್ರಿಕೆಟಿಗ ವಿಕೆಟ್ ಕೀಪರ್ ರಿಶಭ್ ಪಂತ್ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಐಸಿಸಿ ದಂಡ ವಿಧಿಸಿದೆ.
ನಾಟಿಂಗ್ ಹ್ಯಾಮ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಇದೇ ಪಂದ್ಯದಲ್ಲಿ ರಿಷಬ್ ಪಂತ್ ಔಟ್ ಮಾಡಿದ ಸ್ಟುವರ್ಟ್ ಬ್ರಾಡ್ ಅನುಚಿತ ವರ್ತನೆ ತೋರಿದ್ದರು. ನೇರವಾಗಿ ಪಂತ್ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು.
ಐಸಿಸಿ ಕೋಡ್ ಆಫ್ 2.1.7 ನಿಮಯ ಉಲ್ಲಂಘಿಸಿದ ಬ್ರಾಡ್ ಗೆ ಐಸಿಸಿ ಶಿಕ್ಷೆ ವಿಧಿಸಿದೆ. ಪಂದ್ಯದ ಶೇಖಡಾ 15ರಷ್ಟು ಶುಲ್ಕವನ್ನು ದಂಡವಾಗಿ ಪಾವತಿಸುವಂತೆ ಐಸಿಸಿ ಹೇಳಿದೆ.