ಹುಬ್ಬಳ್ಳಿ- ಚಿನ್ನದ ಸರಗಳ್ಳತನ ಮಾಡ್ತಾಯಿದ್ದ ಕುಖ್ಯಾತ ಸಹೋದರಿಯರಿಬ್ಬನ್ನ ಬಂಧಿಸುವಲ್ಲಿ ಹುಬ್ಬಳ್ಳಿ ಉಪನಗರಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಮೂಲದ ಹೇಮಾವತಿ ವಡ್ಡರ ಹಾಗೂ ಶೊಭಾ ವಡ್ಡರ ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 4ಲಕ್ಷ 29ಸಾವಿರ ರೂ. ಮೌಲ್ಯದ 143 ಗ್ರಾಂ. ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಜನರ ಕಣ್ಣಿಗೆ ಮನ್ನೆರಚಿ ಚಿನ್ನದಸರಗಳನ್ನ ಎಗರಿಸುತ್ತಿದ್ದರು. ಅದರಲ್ಲು ಮಹಿಳೆಯರ ವ್ಯಾನಿಟಿ ಬ್ಯಾಗನ ಜಿಪ್ಪ ಎಗರಿಸಿ ಅದರಲ್ಲಿದ್ದ, ಹಣ ಸೇರಿದಂತೆ ಚಿನ್ನಾಭರಣ ಕದ್ದು ಪರಾರಿಯಾಗುತ್ತಿದ್ದರು. ಹುಬ್ಬಳ್ಳಿ ಹಳೇ ಬಸನಿಲ್ದಾಣದಲ್ಲಿ ಅನುಮಾಸ್ಪದವಾಗಿ ಓಡಾಡುತ್ತಿದ್ದ ಇವರನ್ನು, ಉಪನಗರಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತಮ್ಮ ಕಿಲಾಡಿ ಕೈಚಳಕದ ಬಗ್ಗೆ ಬಾಯಿ ಬಿಟ್ಟದ್ದಾರೆಂದು ಪೊಲೀಸರು ಪ್ರಕಟನೆಯಲ್ಲಿ ತಿಳಿದಿದ್ದಾರೆ.