ಪ್ರತಿನಿತ್ಯ ಯೋಗ ಮಾಡಿ

 

ಬೆಂಗಳೂರು, ಆ.22- ವಿದ್ಯಾರ್ಥಿಗಳು ಪ್ರತಿದಿನ ಒಂದುಗಂಟೆಯಾದರೂ ಯೋಗಾಭ್ಯಾಸ ಮಾಡಬೇಕು. ಯೋಗದಿಂದ ಏಕಾಗ್ರತೆ ಬರುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿಡಾ. ವೇಣುಗೋಪಾಲ್‍ಕೆ.ಅರ್. ಕರೆ ನೀಡಿದರು.
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರಥಮ ವರ್ಷದ ಬಿ.ಟೆಕ್ ತರಗತಿ ಉದಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ದೂರವಾಗಿ ದಿನಕ್ಕೆ 1 ಗಂಟೆ ಯೋಗ, 1 ಗಂಟೆ ನಡಿಗೆ, 8 ಗಂಟೆ ಕೆಲಸ ಮಾಡಿದರೆ ತಮ್ಮ ಗುರಿತಲುಪಬಹುದು. ಸರ್. ಎಂ. ವಿಶ್ವೇಶ್ವರಯ್ಯ ಅವರು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆಂದರೆ ಅವರು ದಿನಚರಿ ಹಾಕಿಕೊಂಡು ಕೆಲಸ ಮಾಡುತ್ತಿದ್ದರು, ಹಾಗೇ ಎಲ್ಲಾ ವಿದ್ಯಾರ್ಥಿಗಳು ಮಾಡಿದರೆಯಶಸ್ಸುಕಾಣಬಹುದು ಎಂದರು.
ವಿದ್ಯಾರ್ಥಿಗಳು ಹೆಚ್ಚೆಚ್ಚು ಅಂಕ ಗಳಿಸಿದರೆ ಸರ್ಕಾರ ಸೇರಿದಂತೆ ಸಂಫ-ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯಬಹುದು. ಈ ಹಣದಲ್ಲಿಯೇ ವಿದ್ಯಾಭ್ಯಾಸ ಮುಗಿಸಬಹುದು. ವಿದ್ಯಾರ್ಥಿ ಜೀವನದಲ್ಲೇ ದೊಡ್ಡ ಗುರಿಯನ್ನಿಟ್ಟುಕೊಳ್ಳಬೇಕು. ಅದಕ್ಕೆ ಬೇಕಾದಅಗತ್ಯಕಾರ್ಯಯೋಜನೆ ಸಿದ್ದಪಡಿಸಿಕೊಳ್ಳಬೇಕು ಎಂದರು.
ಪ್ರಸಕ್ತ ವರ್ಷದೊಳಗೆ 1500 ವಿದ್ಯಾರ್ಥಿಗಳ ಸಾಮಥ್ರ್ಯ ಹೊಂದಿರುವ ವಿದ್ಯಾರ್ಥಿನಿಲಯಕ್ಕೆ ಭೂಮಿಪೂಜೆ ಮಾಡಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಯೂ 4 ಭಾಷೆಗಳಲ್ಲಿ ಪರಿಣಿತಿ ಹೊಂದಿರಬೇಕು. ಪ್ರತಿಯೊಬ್ಬ ಶಿಕ್ಷಕರು ಜಾಗತಿಕವಾಗಿ ಸ್ವರ್ಧಾತ್ಮಕವಾಗಿರಬೇಕು ಎಂದರು.
ಬೆಂಗಳೂರು ವಿಶ್ವವಿದ್ಯಾಲಯದ ವಿಶ್ವೇಶ್ವರಯ್ಯ ಇಂಜಿನಿಯರಿಂಗ್‍ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಎನ್‍ರಮೇಶ್ ಮಾತನಾಡಿ, ಬಿ.ಟೆಕ್ ವಿಭಾಗದಲ್ಲಿ ಶಿಕ್ಷಣ ಪಡೆದ ಬಹುತೇಕ ವಿದ್ಯಾರ್ಥಿಗಳಿಗೆ ವಿವಿಧ ಕಂಪನಿಗಳಲ್ಲಿ ಪ್ಲೇಸ್‍ಮೆಂಟ್‍ಆಗಿದೆ. ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಪಠ್ಯದಜೊತೆಗೆ ಪಠ್ಯೇತರಚಟುವಟಿಕೆಆದ್ಯತೆ ನೀಡಲಾಗುತ್ತಿದೆಎಂದರು.
ಎಲೆಕ್ಟ್ರಾನಿಕ್ಸ್‍ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥಡಾ. ಕೆ.ಬಿರಾಜ, ಎಲೆಕ್ಟ್ರಿಕಲ್‍ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥಡಾ. ಇ.ಜಿ ಶಿವಕುಮಾರ್, ಮೆಕ್ಯಾನಿಕಲ್‍ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥಡಾ. ಜಿ.ಎಸ್ ಶಿವರುದ್ರಯ್ಯ, ಪೆÇ್ರಫೆಸರ್ ಕೆ. ಎನ್ ಚಂಪ, ಡಾ.ಪವನ್‍ಕುಮಾರ್, ಡಾ. ಉಷಾಮೂರ್ತಿ, ಡಾ.ದೀಪಾಶೆಣೈ ಸೇರಿದಂತೆ ವಿವಿಧ ವಿಭಾಗದಉಪನ್ಯಾಸಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ