ಮಂಗಳೂರು,ಆ.22-ಕೊಡಗಿನಲ್ಲಿ ಉಂಟಾಗಿರುವ ಜಲಪ್ರಳಯದಲ್ಲಿ ಸಂತ್ರಸ್ತರಾಗಿರುವವರ ನೆರವಿಗೆಂದು ಪಡೆಯುತ್ತಿರುವ ದೇಣಿಗೆ ಸರಿಯಾಗಿ ಅರ್ಹರಿಗೆ ತಲುಪಿತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಸಾರ್ವಜನಿಕರಿಂದ ಯಾರೂ ದೇಣಿಗೆ ಸಂಗ್ರಹಿಸಬಾರದೆಂದು ಸಚಿವ ಯು.ಟಿ.ಖಾದರ್ ಮನವಿ ಮಾಡಿದ್ದಾರೆ.
ಯಾವ್ಯಾವುದೋ ಸಂಘಸಂಸ್ಥೆಗಳು ತಲೆ ಎತ್ತಿದ್ದು, ಸಂತ್ರಸ್ತರ ಹೆಸರಿನಲ್ಲಿ ಜನರಿಂದ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಆದರೆ ಈ ಹಣ ಸಂತ್ರಸ್ತರಿಗೆ ತಲುಪುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದು, ಈ ವಿಷಯದಲ್ಲಿ ಗೊಂದಲ ಉಂಟಾಗಿದೆ. ಆದ್ದರಿಂದ ಯಾರೂ ಕೂಡ ಸಾರ್ವಜನಿಕರಿಂದ ಹಣ ಸಂಗ್ರಹಿಸಬಾರದು ಎಂದು ಹೇಳಿದ್ದಾರೆ.
ಸರ್ಕಾರದಲ್ಲಿ ನೆರೆಸಂತ್ರಸ್ತರಿಗೆ ನೀಡಲು ಹಣವಿದೆ. ಕೊಡಗಿನ ಪರಿಸ್ಥಿತಿಯನ್ನು ಸರ್ಕಾರವೇ ಸರಿಪಡಿಸಲಿದೆ ಎಂದು ಖಾದರ್ ವಿಶ್ವಾಸ ವ್ಯಕ್ತಪಡಿಸಿದರು.