ಆನೇಕಲ್, ಆ.22- ದೇಶಕ್ಕೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಸಹ ಶವ ಸಂಸ್ಕಾರದ ಜಾಗಕ್ಕಾಗಿ ಸರ್ಕಾರಗಳನ್ನು ಭಿಕ್ಷೆ ಬೇಡುವ ಪರಿಸ್ಥಿಯಲ್ಲಿ ನಾವಿದ್ದೇವೆ ಎಂದು ಹೋರಾಟಗಾರ ರಾವಣ ಬೇಸರ ವ್ಯಕ್ತ ಪಡಿಸಿದರು.
ಬೋಡರಹಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು, ಬೋಡರಹಳ್ಳಿ ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟಿರುವ ಸ್ಮಶಾನ ಜಾಗವನ್ನು ಕಬಳಿಕೆ ಮಾಡಲು ಹೊರಟಿರುವ ಭೂಗಳ್ಳರ ಮೇಲೆ ತಾಲ್ಲೂಕು ಆಡಳಿತ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಹೆಣವನ್ನು ತಂದು ತಹಸೀದ್ದಾರ್ ಕಚೇರಿ ಆವರಣದಲ್ಲಿ ಶವ ಸಂಸ್ಕಾರ ಮಾಡಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದರು.
ಪ್ರತಿಯೊಂದು ಗ್ರಾಮದಲ್ಲಿ ಸ್ಮಶಾನ ಕಲ್ಪಿಸಿ ಕೊಡಬೇಕು ಎಂಬುದು ಸರ್ಕಾರಗಳ ಆದೇಶ ಆದರೆ ಬೋಡರಹಳ್ಳಿ ಗ್ರಾಮದಲ್ಲಿ ಸ್ಮಶಾನವಿದ್ದರು ಸಹ ಅದನ್ನು ಬಳಕೆ ಮಾಡದ ಪರಿಸ್ಥಿತಿತಯಲ್ಲಿ ನಾವಿದ್ದೇವೆ ಎಂದು ಹೇಳಿದರು.
ಪಂಚಾಯಿತಿ ಸದಸ್ಯ ಲೋಕೇಶ್ ಮಾತನಾಡಿ, ಬೋಡರ ಗ್ರಾಮದ ಸರ್ವೇ ನಂ 509ರಲ್ಲಿ ಇಪ್ಪತ್ತಾಒಂಭತ್ತು ಏಕರೆ ಸರ್ಕಾರಿ ಜÁಗ ಇದ್ದು ಅದರಲ್ಲಿ 20 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಬೋಡರಹಳ್ಳಿ ಗ್ರಾಮಸ್ಥರು ಈಗಾಗಲೇ ಬಳಸುತ್ತಿದ್ದು ಕೆಲ ಪ್ರಭಾವಿಗಳು ಭೂಮಿ ಕಬಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್ ಮೂರ್ತಿ, ಆನಂದ್ ಚಕ್ರವರ್ತಿ, ಗೀತಾ ನಾಗಭೂಷಣ್, ಅರೇಹಳ್ಳಿ ಅಶ್ವಥ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.