ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವು

ರಾಯಚೂರು, ಆ.22- ಹೃದಯಾಘಾತದಿಂದ ಕೆಎಸ್‍ಆರ್‍ಟಿಸಿ ಬಸ್ ಚಾಲಕ ಸಾವನ್ನಪ್ಪಿರುವ ಘಟನೆ ಮಂತ್ರಾಲಯದಲ್ಲಿ ನಡೆದಿದೆ.
ಬೆಂಗಳೂರು ಮೂಲದ ಶಂಕರ್ (52) ಮೃತ ಚಾಲಕ.
ಬೆಂಗಳೂರು ಕೇಂದ್ರ ಡಿಪೆÇೀಗೆ ಸೇರಿದ ಬಸ್ ಮಂತ್ರಾಲಯಕ್ಕೆ ತೆರಳಿತ್ತು. ಚಾಲಕ ಶಂಕರ್‍ಗೆ ಬಸ್‍ನಲ್ಲೇ ಹೃದಯಾಘಾತವಾಗಿದೆ. ಕೂಡಲೇ ಸಹ ಸಿಬ್ಬಂದಿಗಳು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲೇ ಸಾವನ್ನಪ್ಪಿದ್ದಾರೆ.
ಬಸ್ ಚಾಲನೆ ವೇಳೆ ಏನಾದರೂ ಹೃದಯಾಘಾತವಾಗಿದ್ದರೆ ಭಾರೀ ಅನಾಹುತವೇ ಸಂಭವಿಸುತ್ತಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ