ಮೈಸೂರು, ಆ.22- ದಂಡದ ಹಣ ವಸೂಲಿ ಮಾಡಲು ನಗರದ ಪೆÇಲೀಸರು ಮನೆ ಬಾಗಿಲಿಗೇ ಹೋಗುತ್ತಿದ್ದಾರೆ.
ನಗರದಲ್ಲಿ ಸಂಚರಿಸುವ ವಾಹನಗಳು ದಂಡ ಕಟ್ಟದೆ ಪರಾರಿಯಾಗುವುದು ಮಾಮೂಲಿಯಾಗಿ ಬಿಟ್ಟಿದೆ. ಹಣ ಕಟ್ಟಲು ಸತಾಯಿಸುತ್ತಾರೆ. ಹಾಗಾಗಿ ಪೆÇಲೀಸರು ಖುದ್ದು ವಾಹನ ಸವಾರರ ಮನೆಗೇ ಹೋಗಿ ದಂಡ ಪೀಕಿಸುತ್ತಿದ್ದಾರೆ.
ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು ಸಿಗ್ನಲ್ ಜಂಪ್ ಮಾಡುವುದೂ ಸೇರಿದಂತೆ ಸಂಚಾರಿ ನಿಯಮಗಳನ್ನು ಪಾಲಿಸದವರ ಮನೆಗಳಿಗೆ ನೋಟೀಸ್ ಕಳುಹಿಸಲಾಗುತ್ತದೆ.
ಆದರೂ ಕ್ಯಾರೆ ಅನ್ನದೆ ದಂಡ ಕಟ್ಟದೆಯೇ ವಾಹನ ಚಲಾಯಿಸುತ್ತಿದ್ದಾರೆ ಇದು ಮರು ಕಳಿಸುತ್ತಲೇ ಇರುವುದರಿಂದ ಇಂತಹ ವಾಹನ ಸವಾರರನ್ನು ಗುರುತಿಸಿ ಮನೆಗೇ ತೆರಳಿ ಪೆÇಲೀಸರು ದಂಡ ವಸೂಲಿ ಮಾಡುತ್ತಿದ್ದಾರೆ.
ವಾಹನ ಸವಾರರ ಮನೆಗೆ ದಂಡ ವಸೂಲಿಗೆ ಹೋದ ಸಂದರ್ಭದಲ್ಲಿ ಸೂಕ್ತ ದಾಖಲಾತಿ ನೀಡದೆ ಇದ್ದಲ್ಲಿ ಅಂತಹ ವಾಹನಗಳನ್ನು ಜಪ್ತಿ ಮಾಡುವ ಕೆಲಸವನ್ನೂ ಪೆÇಲೀಸರು ಕೈಗೊಂಡಿದ್ದಾರೆ.