ಬೆಂಗಳೂರು,ಆ.22-ತ್ಯಾಗ, ಬಲಿದಾನ, ಸಹಬಾಳ್ವೆಯ ಪ್ರತೀಕವಾಗಿರುವ ಬಕ್ರೀದ್ ಹಬ್ಬದ ಶುಭಾಷಯಗಳನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಾಡಿನ ಮುಸ್ಲಿಂ ಬಾಂಧವರಿಗೆ ಕೋರಿದ್ದಾರೆ.
ಸಹಬಾಳ್ವೆಯ ಗುಣಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳೋಣ ಎಂದಿರುವ ಮುಖ್ಯಮಂತ್ರಿಗಳು, ಪ್ರಕೃತಿಯ ಮುನಿಸಿನಿಂದ ಸಂಕಷ್ಟಕ್ಕೀಡಾದ ಜನತೆಯ ನೆರವಿಗೆ ಧಾವಿಸಲು ಈ ಹಬ್ಬ ಸ್ಪೂರ್ತಿಯಾಗಲಿ ಎಂದು ಆಶಿಸಿದ್ದಾರೆ.
ವಿಶ್ವಾಸ ಮತ್ತು ನಿಷ್ಕಾಮ ಭಾವನೆಯಿಂದ ನಾವು ಮಾಡುವ ಪ್ರತಿಯೊಂದು ಕಾರ್ಯ ಶುಭವಾಗಿರುತ್ತದೆ ಎಂಬ ಭಾವನೆಯಿಂದ ಆಚರಿಸುವ ಬಕ್ರೀದ್ ಹಬ್ಬದ ಶುಭಾಷಯಗಳನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಕೋರಿದ್ದಾರೆ.
ಹಬ್ಬದ ಸಂದರ್ಭದಲ್ಲಿ ನಾಡಿನ ಜನರಲ್ಲಿ ಸ್ನೇಹ ಹಾಗೂ ಸಹೋದರತ್ವ ಮತ್ತಷ್ಟು ದೃಢಗೊಳ್ಳಲಿ ಎಂದು ಹಾರೈಸಿದ್ದಾರೆ.