ಅಲಹಾಬಾದ್:ಆ-21: ಪತ್ನಿಯ ಶವ ಫ್ರಿಡ್ಜ್ನಲ್ಲಿ, ಹೆಣ್ಣು ಮಕ್ಕಳಿಬ್ಬರ ಶವ ಸೂಟ್ಕೇಸ್ನಲ್ಲಿ, ಮತ್ತೊಬ್ಬ ಮಗಳ ದೇಹ ಕೋಣೆಯೊಂದರಲ್ಲಿಟ್ಟು ತಂದೆ ಆತ್ಮಹತ್ಯೆಗೆ ಶರಣಾಗಿರುವ ಭೀಕರ ಘಟನೆ ಅಲಹಾಬಾದ್ ಧೂಮ್ಗಂಜ್ ನಲ್ಲಿ ನಡೆದಿದೆ.
ಬಾಗಿಲು ಒಡೆದು ಮನೆಯೊಳಗೆ ಪ್ರವೇಶಿಸಿದಾಗ ಈ ಭಯಕಂರ ದೃಶ್ಯಗಳನ್ನು ಕಂಡ ಪೊಲೀಸ್ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ಅಲಹಾಬಾದ್ನ ಹಿರಿಯ ಎಸ್ಪಿ ನಿತಿನ್ ತಿವಾರಿ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ನೇಣು ಬಿಗದ ಸ್ಥಿತಿಯಲ್ಲಿ ಮನೋಜ್ ಕುಮಾರ್ ಎಂಬವರ ದೇಹ ಪತ್ತೆಯಾಗಿದೆ. ಆತನೇ ಹೆಂಡತಿ ಹಾಗೂ ಮಕ್ಕಳನ್ನು ಕೊಲೆ ಮಾಡಿ ಫ್ರಿಡ್ಜ್, ಅಲ್ಮೆರಾ, ಸ್ಯೂಟ್ಕೇಸ್ನಲ್ಲಿ ಮೃತದೇಹಗಳನ್ನು ಇಟ್ಟಿದ್ದಾನೆ. ಕೌಟುಂಬಿಕ ಜಗಳ ಅಥವಾ ಮೇಲಿನ ಪತ್ನಿಅನುಮಾನದಿಂದ ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂಬುದು ತಿಳಿದುಬಂದಿದೆ ಎಂದರು.