ತನ್ನ ವಿರುದ್ಧದ ದೂರನ್ನು ವಾಪಸ್ ಪಡೆಯದ ಯುವತಿಯನ್ನು ಹತ್ಯೆಗೈದ ಯುವಕ

ಭೋಪಾಲ್: ಲೈಂಗಿಕ ದೌರ್ಜನ್ಯ ದೂರು ವಾಪಸು ಪಡೆಯದ ಕಾರಣ ಯುವತಿಯನ್ನು ಆರೋಪಿ ಹಾಡುಹಗಲಲ್ಲೇ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ.

ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಅವಳನ್ನು ಅಡ್ಡ ಹಾಕಿದ ಆರೋಪಿ ಅನಿಲ್​ ಶರ್ಮಾ(38) ಆಕೆಯ ಕೂದಲನ್ನು ಹಿಡಿದು ಎಳೆದಾಡಿ ತಲೆಯನ್ನು ಕಲ್ಲಿಗೆ ಜಜ್ಜಿದ್ದಾನೆ.

ಸಾರ್ವಜನಿಕರು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ಯುವತಿ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಅರವಿಂದ್ ಜೈನ್​ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ