ಭೋಪಾಲ್: ಲೈಂಗಿಕ ದೌರ್ಜನ್ಯ ದೂರು ವಾಪಸು ಪಡೆಯದ ಕಾರಣ ಯುವತಿಯನ್ನು ಆರೋಪಿ ಹಾಡುಹಗಲಲ್ಲೇ ಹತ್ಯೆಗೈದಿರುವ ಭೀಕರ ಘಟನೆ ಮಧ್ಯಪ್ರದೇಶದ ಸಿಯೋನಿಯಲ್ಲಿ ನಡೆದಿದೆ.
ಯುವತಿ ಕಾಲೇಜಿಗೆ ತೆರಳುತ್ತಿದ್ದಾಗ ಅವಳನ್ನು ಅಡ್ಡ ಹಾಕಿದ ಆರೋಪಿ ಅನಿಲ್ ಶರ್ಮಾ(38) ಆಕೆಯ ಕೂದಲನ್ನು ಹಿಡಿದು ಎಳೆದಾಡಿ ತಲೆಯನ್ನು ಕಲ್ಲಿಗೆ ಜಜ್ಜಿದ್ದಾನೆ.
ಸಾರ್ವಜನಿಕರು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗುತ್ತಿದ್ದ ಕಾರಣ ಯುವತಿ ಮಾರ್ಗ ಮಧ್ಯದಲ್ಲೇ ಮೃತಪಟ್ಟಿದ್ದಾಳೆ. ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅರವಿಂದ್ ಜೈನ್ ತಿಳಿಸಿದ್ದಾರೆ.