
ಹುಬ್ಬಳ್ಳಿ:- ಕೊಡುಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯಿಂದ ತತ್ತರಿಸಿರುವ ಸಂತ್ರಸ್ತರ ನೆರವಿಗಾಗಿ, ಹುಬ್ಬಳ್ಳಿ ಆಟೋ ಚಾಲಕ ಮತ್ತು ಮಾಲೀಕರ ಸಂಘದ ವತಿಯಿಂದ ಧನ ಸಹಾಯಕ್ಕಾಗಿ ನಿಧಿ ಸಂಗ್ರಹಿಸಾಲಯಿತು.
ಸಂಘದ ಸದಸ್ಯರು ಹಾಗೂ ಅಟೋ ಚಾಲಕರು, ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಸಂತ್ರಸ್ತರಿಗಾಗಿ ಸಹಾಯ ಹಸ್ತ ಚಾಚಿದರು. ಮಾರುಕಟ್ಟೆ ಸರ್ಕಾರಿ ಕಚೇರಿ ಸೇರಿದಂತೆ ವಿವಿದೆಡೆಯಿಂದ ಒಟ್ಟು 33697 ರೂ. ಸಂಗ್ರಹಿದರು. ಸಂಗ್ರಹಿಸಿದ ಒಟ್ಟು ಮೊತ್ತವನ್ನು ಹುಬ್ಬಳ್ಳಿ ತಹಸೀಲ್ದಾರ ಶಶಿದರ ಮಾಡ್ಯಾಳ ಅವರ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಬ್ಯಾಂಕ್ ಖಾತೆಗೆ ಡಿಡಿ ಸಲ್ಲಿಸಿದರು.