ಹುಬ್ಬಳ್ಳಿ-: ಮಾರಕ ಬೌಲಿಂಗ್ ಮತ್ತು ಅದ್ಬುತ ಬ್ಯಾಟಿಂಗ್ ಪ್ರದರ್ಶಿಸಿದ ಮೈಸೂರು ವಾರಿಯರ್ಸ ತಂಡ, ಹುಬ್ಬಳ್ಳಿ ರಾಜ್ ನಗರದ ಕೆಎಸ್.ಸಿ. ಮೈದಾನದಲ್ಲಿ ನಡೆದ, 7ನೇ ಆವೃತ್ತಿಯ 5ನೇ ಪಂದ್ಯದಲ್ಲಿ ಬಳ್ಳಾರಿ ಟಸ್ಕರ್ಸ್ ತಂಡದ ವಿರುದ್ಧ 7 ವಿಕೇಟ್ ಅಂತರದಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ, ಮೈಸೂರು ವಾರಿಯರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ತಂಡವನ್ನು 147 ರನ್ನಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿ ಆಯ್ತು. ನಂತರ ದಿಟ್ಟ ಬ್ಯಾಟಿಂಗ್ ಪ್ರದರ್ಶನದ ಮೂಲಕ 18.5 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 147 ರನ್ ಗಳಿಸುವ ಮೂಲಕ ಜಯಗಳಿಸಿತು. ಇದರೊಂದಿಗೆ ಮೈಸೂರು ವಾರಿಯರ್ಸ್ ತಂಡ ಶುಭಾರಂಭ ಕಂಡರೆ, ಬಳ್ಳಾರಿ ತಂಡ ಸತತ 2ನೇ ಪಂದ್ಯದಲ್ಲಿ ಸೋಲೊಪ್ಪಿಕೊಂಡಿತು.
ಆರಂಭಿಕ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದ ಮೈಸೂರು ವಾರಿಯರ್ಸ್ ತಂಡಕ್ಕೆ 2ನೇ ಕ್ರಮಾಂಕದಲ್ಲಿ ಅಂಗಳಿಕ್ಕಿಳಿದ ಅಮಿತ ವರ್ಮಾ(59), ಅವರು, ಆರಂಭಿಕ ಆಟಗಾರ ರಾಜು ಭಟ್ಕಳ(48) ಅವರೊಂದಿಗೆ ಅತ್ಯುತ್ತಮ ಜೊತೆಯಾಟ ಪ್ರದರ್ಶಿಸಿ, ತಂಡದ ಗೆಲುವಿಗೆ ರುವಾರಿಯಾದರು.
ಸಂಕ್ಷಿಪ್ತ ಸ್ಕೋರ್: ಬಳ್ಳಾರಿ ಟಸ್ಕರ್ಸ್: 20 ಓವರ್ಗಳಲ್ಲಿ 145/8 (ರೋಹನ್ ಕದಮ್ 59, ದೇವ್ ದತ್ ಪಡಿಕಲ್ 60; ವೈಶಾಕ್ ವಿಜಯಕುಮಾರ್ 4-20, ಜೆ ಸುಚಿತ್ 2-20) ವಿರುದ್ಧ ಮೈಸೂರು ವಾರಿಯರ್ಸ್ 18.5 ಓವರಗಳಲ್ಲಿ 147 (ರಾಜು ಭಟ್ಕಲ್ 48, ಅಮಿತ್ ವರ್ಮಾ 59; ಕಾಜಿ 2-20).