ಸಂತ್ರಸ್ಥರಿಗೆ ಪರಿಹಾರ ಸಾಮಗ್ರಿ ನೀಡುತ್ತಿರುವವರಿಗೆ ಜಿಲ್ಲಾಧಿಕಾರಿ ಕೃತಜ್ಞತೆ

 

ಬೆಂಗಳೂರು, ಆ.20- ಬಟ್ಟೆ, ನೀರು, ಹಾಲು, ಆಹಾರ ಪದಾರ್ಥ ಸೇರಿದಂತೆ ಹತ್ತು-ಹಲವು ರೀತಿಯ ಪರಿಹಾರ ಸಾಮಗ್ರಿಗಳನ್ನು ಕೊಡಗಿನ ಸಂತ್ರಸ್ಥರಿಗೆ ನೀಡುತ್ತಿರುವ ನಾಡಿನ ಜನರಿಗೆ ಕೃತಜ್ಞತೆ ಸಲ್ಲಿಸಿರುವ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು, ಇಲ್ಲಿನ ಜನರಿಗೆ ಅಗತ್ಯವಿರುವ ಹಲವು ವಸ್ತುಗಳನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
ಪ್ರಜ್ಞಾವಂತ ನಾಗರಿಕರು ಒಂದೇ ರೀತಿಯ ಪದಾರ್ಥಗಳನ್ನು ಕಳುಹಿಸಿಕೊಡುವುದಕ್ಕಿಂತ ಇಲ್ಲಿನ ಜನರಿಗೆ ಅಗತ್ಯವಿರುವ ವಸ್ತುಗಳನ್ನು ಸಹಾಯ ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.
ಪ್ಲಾಸ್ಟಿಕ್ ಬಕೆಟ್ -ಮಗ್, ರೈನ್ ಕೋಟ್, ಬೆಚ್ಚನೆಯ ಹೊದಿಕೆಗಳು, ಬಟ್ಟೆಗಳು, ಚಪ್ಪಲಿ, ಗಮ್‍ಬೂಟ್‍ಗಳು, ಗ್ಲೌಸ್, ಸ್ಯಾನಿಟರಿ ನ್ಯಾಪ್‍ಕಿನ್ಸ್, ಡೈಪರ್ಸ್, ಪ್ಲಾಸ್ಟಿಕ್ ಮ್ಯಾಟ್‍ಗಳು, ಛತ್ರಿಗಳು, ಟಾರ್ಜ್‍ಲೈಟ್‍ಗಳು, ಡೆಟಾಲ್, ಪೆನಾಯಿಲ್, ಬ್ಲೀಚಿಂಗ್ ಪೌಡರ್, ಸೋಪ್‍ಗಳು, ಶಾಂಪೂ, ಟೂತ್‍ಪೇಸ್ಟ್, ಬ್ರಷ್, ಅಡುಗೆ ಮನೆ ಪದಾರ್ಥಗಳು, ಮೇಣದ ಬತ್ತಿ, ಟವೆಲ್,ಪಂಚೆ, ನೈಟಿ, ಆ್ಯಂಟಿ ಸೆಪ್ಟಿಕ್ ಲೋಷನ್, ಸೊಳ್ಳೆ ಬತ್ತಿ, ಅಡುಗೆ ಎಣ್ಣೆ, ಒಳಉಡುಪುಗಳು, ಲಗೇಜ್ ಬ್ಯಾಗ್ ಇನ್ನಿತರ ಅವಶ್ಯಕ ವಸ್ತುಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿರುವ ಅವರು, ನೀವು ಕಳುಹಿಸುವ ಎಲ್ಲಾ ಪದಾರ್ಥಗಳನ್ನು ಜಿಲ್ಲಾಡಳಿತಕ್ಕೆ ತಲುಪಿಸಿದರೆ ಜಿಲ್ಲಾಡಳಿತ ಅಗತ್ಯವಿರುವ ಜನತೆಗೆ ಅದನ್ನು ವಿತರಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ