ರಾಜ್ಯೋತ್ಸವ ಪ್ರಶಸ್ತಿ ಪ್ರಮಾಣ ಹೆಚ್ಚಿಸಲು ಮನವಿ

Deve Gowda

 

ಬೆಂಗಳೂರು, ಆ.20-ಅನಿವಾಸಿ ಕನ್ನಡಿಗರಿಗೆ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಮಾಣವನ್ನು ಕನಿಷ್ಟ 3 ರಿಂದ 5ಕ್ಕೆ ಹೆಚ್ಚಿಸಬೇಕೆಂದು ಕನ್ನಡಿಗರು ದುಬೈ ಸಂಘಟನೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ರಾಜ್ಯಸರ್ಕಾರ ಇದುವರೆಗೂ ಒಬ್ಬರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದ್ದು, ಇದನ್ನು ಮೂರರಿಂದ ಐದು ಮಂದಿಗೆ ಹೆಚ್ಚಿಸಬೇಕೆಂದು ಸಂಘಟನೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಫುರುಲ್ಲಾ ಖಾನ್ ನೇತೃತ್ವದಲ್ಲಿ ಸಂಘಟನೆ ಅಧ್ಯಕ್ಷ ಸದನ್‍ದಾಸ್ ಮತ್ತಿತರರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ನೆಲೆಸಿದ್ದಾರೆ. ಅಲ್ಲಿ ಕೆಲವರು ಉದ್ಯಮಿಗಳಾಗಿ, ಉದ್ಯೋಗಿಗಳಾಗಿ, ಲೇಖಕರಾಗಿ, ಸಾಹಿತಿ, ಕಲಾವಿದರಾಗಿ ಕನ್ನಡದ ಸೇವೆ ಮಾಡುತ್ತಿದ್ದಾರೆ. ಕನ್ನಡ ನುಡಿಗೆ ಸೇವೆ ಸಲ್ಲಿಸಿರುವವರನ್ನು ಗುರುತಿಸಿ ರಾಜ್ಯ ಸರ್ಕಾರ ಪ್ರತಿವರ್ಷವೂ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿದೆ. ಅನಿವಾಸಿ ಕನ್ನಡಿಗರೊಬ್ಬರಿಗೆ ಮಾತ್ರ ರಾಜ್ಯೋತ್ಸ ನೀಡುತ್ತಿದ್ದು, ಅದನ್ನು ಕನಿಷ್ಠ 3 ರಿಂದ 5 ಮಂದಿಗೆ ಹೆಚ್ಚಿಸಬೇಕೆಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ