
ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ 2018 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆಯನ್ನು ಮುಂದುವರೆದಿದ್ದು, 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಶೂಟಿಂಗ್ ನಲ್ಲಿ ಬೆಳ್ಳಿ ಪದಕ ಲಭಿಸಿದೆ.
ಪುರುಷರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ದೀಪಕ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ. 249.1 ಅಂಕಗಳೊಂದಿಗೆ ಚೀನಾದ ಯಾಂಗ್ ಹರಾನ್ ಅಗ್ರ ಸ್ಥಾನಿಯಾಗಿ ಚಿನ್ನದ ಪದಕ ಗೆದ್ದರೆ, 247.7 ಅಂಕಗಳೊಂದಿಗೆ ದೀಪಕ್ ಕುಮಾರ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು.
ನಿನ್ನೆಯಷ್ಟೇ ಭಾರತದ ಮತ್ತೊಬ್ಬ ಶೂಟರ್ ರವಿಕುಮಾರ್ ಮಿಶ್ರಾ 10 ಮೀಟರ್ ರೈಫಲ್ ವಿಭಾಗದಲ್ಲಿ ಅಪೂರ್ವಿ ಚಂಡೇಲಾರೊಂದಿಗೆ ಕಂಚಿನ ಪದಕ ಗೆದ್ದಿದ್ದರು.