ಪಾಂಡ್ಯ ಕೈಚಳಕಕ್ಕೆ ಪತರಗುಟ್ಟಿದ ಇಂಗ್ಲೆಂಡ್ 161 ಕ್ಕೆ ಸರ್ವಪತನ: ಭಾರತಕ್ಕೆ 168 ರನ್ ಮುನ್ನಡೆ

ನ್ಯಾಟಿಂಗ್ ಹ್ಯಾಮ್: ನ್ಯಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ನಡುವಿನ 3 ನೇ ಟೆಸ್ಟ್ ಪಂದ್ಯದ 2 ನೇ ದಿನ ಇಂಗ್ಲೆಂಡ್ ತಂಡವನ್ನು 161 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.
ಟಿ ಬ್ರೇಕ್ ವೇಳೆಗೆ ಇಂಗ್ಲೆಂಡ್ ತಂಡ 161 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದ್ದು 5 ವಿಕೆಟ್ ಗಳಿಸಿದ ಹಾರ್ದಿಕ್ ಪಾಂಡ್ಯಾ ಕೈಚಳಕದೆದುರು ತತ್ತರಿಸಿದೆ.
ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಐದು ವಿಕೆಟ್ ಸಾಧನೆ ಮಾಡಿದ್ದರೆ ರಿಷಭ್ ಪಂತ್  ತಮ್ಮ ಮೊದಲ ಪಂದ್ಯದಲ್ಲೇ 5 ಕ್ಯಾಚ್ ಗಳನ್ನು ಪಡೆದಿದ್ದಾರೆ.  ಹಾರ್ದಿಕ್ ಪಾಂಡ್ಯ ಬೌಲಿಂಗ್ ನೆರವಿನಿಂದ ಭಾರತ 168 ರನ್ ಮುನ್ನಡೆ ಸಾಧಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ