
ನ್ಯಾಟಿಂಗ್ ಹ್ಯಾಮ್: ನ್ಯಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್-ಭಾರತ ನಡುವಿನ 3 ನೇ ಟೆಸ್ಟ್ ಪಂದ್ಯದ 2 ನೇ ದಿನ ಇಂಗ್ಲೆಂಡ್ ತಂಡವನ್ನು 161 ರನ್ ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಗಿದೆ.
ಟಿ ಬ್ರೇಕ್ ವೇಳೆಗೆ ಇಂಗ್ಲೆಂಡ್ ತಂಡ 161 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದ್ದು 5 ವಿಕೆಟ್ ಗಳಿಸಿದ ಹಾರ್ದಿಕ್ ಪಾಂಡ್ಯಾ ಕೈಚಳಕದೆದುರು ತತ್ತರಿಸಿದೆ.
ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ಐದು ವಿಕೆಟ್ ಸಾಧನೆ ಮಾಡಿದ್ದರೆ ರಿಷಭ್ ಪಂತ್ ತಮ್ಮ ಮೊದಲ ಪಂದ್ಯದಲ್ಲೇ 5 ಕ್ಯಾಚ್ ಗಳನ್ನು ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ನೆರವಿನಿಂದ ಭಾರತ 168 ರನ್ ಮುನ್ನಡೆ ಸಾಧಿಸಿದೆ.