ಬೆಂಗಳೂರು : ಫ್ಲಿಪ್ಕಾರ್ಟ್ ಇ- ಕಾಮರ್ಸ್ ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್ಮಾರ್ಟ್ ಸಂಸ್ಥೆ ತಿಳಿಸಿದೆ.
ದಲ್ಲದೆ ಫ್ಲಿಪ್ ಕಾರ್ಟ್ ವ್ಯವಹಾರ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಟೋನ್ವಿಲ್ಲೆ ದೈತ್ಯ ಕಂಪನಿ 2 ಬಿಲಿಯನ್ ಅಮೆರಿಕಾ ಡಾಲರ್ ಹೂಡಿಕೆ ಮಾಡುತ್ತಿದೆ. ಈ ಹೂಡಿಕೆಯೊಂದಿಗೆ ವಾಲ್ ಮಾರ್ಟ್ ಈಗ ಫ್ಲಿಪ್ ಕಾರ್ಟ್ ನಲ್ಲಿ ಶೇ, 77 ರಷ್ಟು ಪಾಲನ್ನು ತನ್ನದಾಗಿಸಿಕೊಂಡಿದೆ.ಫ್ಲಿಪ್ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್, ಟೆನ್ಸೆಂಟ್, ಟೈಗರ್ ಗ್ಲೋಬಲ್ ಮತ್ತು ಮೈಕ್ರೋಸಾಫ್ಟ್ ಕಾರ್ಪ್ ಸೇರಿದಂತೆ ಇತರ ಷೇರುದಾರರು ವ್ಯಾಪಾರದ ಉಳಿದ ಭಾಗವನ್ನು ಹೊಂದಿದ್ದಾರೆ ಎಂದು ಹೇಳಿಕೆಯೊಂದು ಹೇಳಿದೆ. ಇದರಿಂದಾಗಿ ವಾಲ್ ಮಾರ್ಟ್ ಅಂತಾರಾಷ್ಟ್ರೀಯ ವ್ಯವಹಾರದ ವಿಭಾಗದಲ್ಲಿಯೇ ಫ್ಲಿಪ್ ಕಾರ್ಟ್ ಹಣಕಾಸು ಜೊತೆಗೊಡಲಿದೆ ಎಂಬಂತಹ ಮಾಹಿತಿಗಳು ಬಂದಿವೆ.ಎರಡು ಕಂಪನಿಗಳು ಏಕರೀತಿಯ ಬ್ರಾಂಡ್ ಹೊಂದಿರಲಿದ್ದು. ಭಾರತದ ಮಾರುಕಟ್ಟೆ ಸ್ವರೂಪಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲಾಗುವುದು, ಫ್ಲಿಪ್ ಕಾರ್ಟ್ ನ ನಿರ್ವಹಣಾ ತಂಡವೇ ವ್ಯವಹಾರವನ್ನು ನೋಡಿಕೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.ಭಾರತೀಯ ಗ್ರಾಹಕರಿಗೆ ಗುಣಮಟ್ಟ ಹಾಗೂ ರಿಯಾಯಿತಿ ದರದಲ್ಲಿ ಸರಕುಗಳನ್ನು ಒದಗಿಸುವ ನಿಟ್ಟಿನಲ್ಲಿ ಹೂಡಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಹೊಸ ಉದ್ಯೋಗಾವಕಾಶ ದೊರೆಯಲಿವೆ. ಜೊತೆಗೆ ಫ್ಲಿಪ್ ಕಾರ್ಟ್ ಬೆಳವಣಿಗೂ ಶ್ರಮಿಸಲಾಗುವುದು ಎಂದು ವಾಲ್ ಮಾರ್ಟ್ ಅಂತಾರಾಷ್ಟ್ರೀಯ ಸಂಸ್ಥೆ ಅಧ್ಯಕ್ಷ ಹಾಗೂ ಸಿಇ ಓ ಜುಡಿಟ್ ಮೆಕ್ಯಾನಾ ಹೇಳಿದ್ದಾರೆ.ವಾಲ್ ಮಾರ್ಟ್ ಜೊತೆ ಸೇರಿರುವುದರಿಂದ ಫ್ಲಿಪ್ ಕಾರ್ಟ್ ಆರ್ಥಿಕ, ತಾಂತ್ರಿಕ ಮತ್ತು ಸ್ಥಳೀಯವಾಗಿಯೂ ಸದೃಢಗೊಳ್ಳಲಿದೆ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಹೊಸ ಅಲೆ ಉಂಟುಮಾಡುವ ವಿಶ್ವಾಸ ಇರುವುದಾಗಿ ಫ್ಲಿಪ್ ಕಾರ್ಟ್ ಸಹ ಸಂಸ್ಥಾಪಕ ಬಿನ್ನಿ ಬನ್ಸಾಲ್ ಹೇಳಿದ್ದಾರೆ.