ಏಷ್ಯನ್ ಕ್ರೀಡಾಕೂಟ 2018: ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನಿಯಾಗೆ ಚಿನ್ನದ ಪದಕ

ನವದೆಹಲಿ: ಕುಸ್ತಿ ಪಟು ಬಜರಂಗ್ ಪುನಿಯಾ ಏಷ್ಯನ್ ಕ್ರೀಡಾಕೂಟದ 18 ನೇ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಜಪಾನ್ ನ ತಕಾತನಿ ಡೈಚಿ ವಿರುದ್ಧ ಗೆದ್ದಿರುವ ಪುನಿಯಾ ಪುರುಷರ ಫ್ರೀಸ್ಟೈಲ್ ನ 65 ಕೆಜಿ ವಿಭಾಗದ ಫೈನಲ್ಸ್ ನಲ್ಲಿ ಗೆದ್ದಿದ್ದು ಚಿನ್ನದ ಪದಕ ಪಡೆದಿದ್ದಾರೆ.
ಮೊದಲ ಹಂತದಲ್ಲೇ ಡೈಚಿ ವಿರುದ್ಧ 6-0 ಮುನ್ನಡೆ ಕಾಯ್ದುಕೊಂಡಿದ್ದ ಪುನಿಯಾಗೆ ಎರಡನೇ ಹಂತದಲ್ಲಿ ಡೈಚಿ ಪ್ರಬಲ ಪೈಪೋಟಿ ನೀಡಿದರು. ಆದರೆ ಅಂತಿಮವಾಗಿ ಪುನಿಯಾ ಎದುರು ಸೋಲೊಪ್ಪಿಕೊಂಡರು. ನಾಲ್ಕು ವರ್ಷಗಳ ಹಿಂದೆ ಇಂಚಿಯನ್ ಏಷ್ಯನ್ ಗೇಮ್ಸ್ ನಲ್ಲಿ ಪುನಿಯಾ ಬೆಳ್ಳಿ ಪದಕ ಗೆದ್ದಿದ್ದರು.
24 ವರ್ಷದ ಭಾರತೀಯ ಕ್ರೀಡಾ ಪಟು ಸಿಡಬ್ಲ್ಯುಜಿ ನಲ್ಲಿ ಮೂರು ಬಾರಿ ಸತತವಾಗಿ ಚಿನ್ನದ ಪದಕ ಗೆದ್ದಿರುವ ಸಾಧನೆ ಮಾಡಿದ್ದು, ಏಷ್ಯನ್ ಗೇಮ್ಸ್ ಗೂ ಮುನ್ನ ಜಾರ್ಜಿಯಾದಲ್ಲಿ ನಡೆದ ತ್ಬಿಲಿಸಿ ಗ್ರ್ಯಾಂಡ್ ಪ್ರಿಕ್ಸ್‌ ನಲ್ಲಿ  ಹಾಗೂ ಇಸ್ತಾನ್ಬುಲ್ ನಲ್ಲಿ ನಡೆದ ಯಾಸರ್ ಡೊಗು ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ