
ನವದೆಹಲಿ: ಕುಸ್ತಿ ಪಟು ಬಜರಂಗ್ ಪುನಿಯಾ ಏಷ್ಯನ್ ಕ್ರೀಡಾಕೂಟದ 18 ನೇ ಆವೃತ್ತಿಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದಾರೆ. ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಜಪಾನ್ ನ ತಕಾತನಿ ಡೈಚಿ ವಿರುದ್ಧ ಗೆದ್ದಿರುವ ಪುನಿಯಾ ಪುರುಷರ ಫ್ರೀಸ್ಟೈಲ್ ನ 65 ಕೆಜಿ ವಿಭಾಗದ ಫೈನಲ್ಸ್ ನಲ್ಲಿ ಗೆದ್ದಿದ್ದು ಚಿನ್ನದ ಪದಕ ಪಡೆದಿದ್ದಾರೆ.
ಮೊದಲ ಹಂತದಲ್ಲೇ ಡೈಚಿ ವಿರುದ್ಧ 6-0 ಮುನ್ನಡೆ ಕಾಯ್ದುಕೊಂಡಿದ್ದ ಪುನಿಯಾಗೆ ಎರಡನೇ ಹಂತದಲ್ಲಿ ಡೈಚಿ ಪ್ರಬಲ ಪೈಪೋಟಿ ನೀಡಿದರು. ಆದರೆ ಅಂತಿಮವಾಗಿ ಪುನಿಯಾ ಎದುರು ಸೋಲೊಪ್ಪಿಕೊಂಡರು. ನಾಲ್ಕು ವರ್ಷಗಳ ಹಿಂದೆ ಇಂಚಿಯನ್ ಏಷ್ಯನ್ ಗೇಮ್ಸ್ ನಲ್ಲಿ ಪುನಿಯಾ ಬೆಳ್ಳಿ ಪದಕ ಗೆದ್ದಿದ್ದರು.