
ಜಕಾರ್ತ,ಆ.19- ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಕುಸ್ತಿಪಟು ಸುಶೀಲ್ಕುಮಾರ್ ಅವರಿಗೆ ಇಂಡೋನೇಷ್ಯದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ದ ಲ್ಲಿ ಸೆಮಿಫೈನಲ್ನಲ್ಲಿ ಆಘಾತಕಾರಿ ಸೋಲು ಉಂಟಾಗಿದ್ದು, ದೇಶದ ಕ್ರೀಡಾಪ್ರೇಮಿಗಳಲ್ಲಿ ಭಾರೀ ನಿರಾಸೆಗೆ ಕಾರಣವಾಗಿದೆ.
ಇಂದು ಬೆಳಗ್ಗೆ ನಡೆದ 74 ಕೆಜಿ ವಿಭಾಗದ ಕುಸ್ತಿ ಪಂದ್ಯದಲ್ಲಿ ಬಹ್ರೇನ್ನ ಆ್ಯಡಂ ಬಟಿರೋವ್ ಅವರು ಪ್ರಬಲ ಸುಶೀಲ್ಕುಮಾರ್ ಅವರನ್ನು ಮಣಿಸಿದರು. ಇದರೊಂದಿಗೆ ಕುಸ್ತಿಯಲ್ಲಿ ಭಾರತಕ್ಕೆ ಭಾರೀ ನಿರಾಸೆಯಾಗಿದೆ.
ಬಟಿರೋವ್ ಅವರೊಂದಿಗೆ ನಡೆದ ಹಣಾಹಣಿಯಲ್ಲಿ 3-5 ಸುತ್ತುಗಳಿಂದ ಸುಶೀಲ್ ಪರಾಭವಗೊಂಡು ಅರ್ಹತೆ ಕಳೆದುಕೊಂಡರು. ಮೊದಲ ಅವಧಿಯಲ್ಲಿ 2-1ರಿಂದ ಮುನ್ನಡೆಯಲಿದ್ದ ಅವರು ನಂತರ ಬಟಿರೋವ್ಗೆ ಶರಣಾದರು. ಈ ಸೋಲಿನಿಂದ ಭಾರತೀಯ ಕ್ರೀಡಾಭಿಮಾನಿಗಳಿಗೆ ಆಘಾತವಾಗಿದೆ.