ವಾಜಪೇಯಿ ನಿಧನ ದೇಶಕ್ಕೆ ಅಪಾರ ನಷ್ಟ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ

 

ಬೆಂಗಳೂರು,ಆ.18- ದೇಶ ಕಂಡ ಅತ್ಯಂತ ಧೀಮಂತ ರಾಜಕಾರಣಿ, ಅಜಾತ ಶತ್ರು, ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ದೇಶಕ್ಕೆ ಅಪಾರ ನಷ್ಟ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದರು.
ವಿಶ್ವ ಮನ್ನಣೆ ಗಳಿಸಿದ್ದ ವಾಜಪೇಯಿ ಅವರ ಬದುಕೇ ನಮಗೆ ಆದರ್ಶ. ಒಬ್ಬ ಸಾಮಾನ್ಯ ಶಿಕ್ಷಕರ ಮಗನಾಗಿದ್ದ ವಾಜಪೇಯಿ ಅವರು ಶ್ರೇಷ್ಠ ಪತ್ರಕರ್ತರಾಗಿ ತಮ್ಮ ಬದುಕಿನ ಹಾದಿ ಆರಂಭಿಸಿದರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದಲೋನದಲ್ಲಿ ಭಾಗವಹಿಸಿ ಬಂಧನಕ್ಕೊಳಗಾದರಲ್ಲದೇ ಸ್ವದೇಶ್, ವೀರಾರ್ಜುನ್, ರಾಷ್ಟ್ರಧರ್ಮ ಮತ್ತು ಪಾಂಚಜನ್ಯದಂತಹ ಜನಪ್ರಿಯ ಪತ್ರಿಕೆಗಳ ಸಂಪಾದಕರಾಗಿ ದುಡಿದರು.
ವೃತ್ತ ಪತ್ರಿಕೆಗಳ ಆವೃತ್ತಿಗಳನ್ನು ಹೊರ ತರಲು ಮುದ್ರಣಾಲಯದಲ್ಲಿ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆದದ್ದು ಅವರ ಬದ್ದತೆಗೆ ಸಾಕ್ಷಿಯಾಗಿದೆ ಎಂದು ಸಂತೋಷ್ ಹೆಗಡೆ ಪ್ರಶಂಸಿಸಿದರು.

ಮೊನ್ನೆ ನಿಧನರಾದ ಮಾಜಿ ಪ್ರಧಾನಿ ವಾಜಪೇಯಿ ಅವರಿಗೆ ರಾಷ್ಟ್ರೀಯ ಚಾಲಕರ ಒಕ್ಕೂಟದ ವತಿಯಿಂದ ಪ್ರೆಸ್ ಕ್ಲಬ್‍ನಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಕರ್ತ ವೃತ್ತಿಯ ಜೊತೆಗೆ ಸಂಸದೀಯಪಟುವಾಗಿ ಅಭಿವೃದ್ಧಿಯ ಹರಿಕಾರ, ಆಮೂಲಾಗ್ರ ಬದಲಾವಣೆಯ ಗುರಿಕಾರ, ಸುವರ್ಣ ಚತುಷ್ಪಥ ರಸ್ತೆ ಹೆದ್ದಾರಿ ನಿರ್ಮಿಸಿ ಚಾಲಕರಿಗೆ ಅಚ್ಚುಮೆಚ್ಚಾಗಿದ್ದ ವಾಜಪೇಯಿ ಅವರ ನಿಧನ ಚಾಲಕರ ಒಕ್ಕೂಟಕ್ಕೆ ತುಂಬಲಾರದ ನಷ್ಟವಾಗಿದೆ. ಮಹಾನ್ ಚೇತನ ದೈಹಿಕವಾಗಿ ಕಣ್ಮರೆಯಾಗಿದ್ದರೂ ಅವರ ಕೆಲಸಗಳು ಅಚ್ಚಳಿಯದೆ ಉಳಿದಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಕಾಂಗ್ರೆಸ್ ಮುಖಂಡ ಪೆÇ್ರ.ರಾಧಾಕೃಷ್ಣ, ಬಿಜೆಪಿ ಮುಖಂಡ ರಾಮಚಂದ್ರೇಗೌಡ, ಒಕ್ಕೂಟದ ಅಧ್ಯಕ್ಷ ಗಂಡಸಿ, ಸದಾನಂದಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ