ಒಂದು ಲಕ್ಷ ಪುಸ್ತಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರ

 

ಬೆಂಗಳೂರು,ಆ.18- ಮಾರಾಟ ವಾಗದೆ ಉಳಿದಿರುವ ಒಂದು ಲಕ್ಷ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವೆ ಡಾ.ಜಯಮಾಲ ಇಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಿದರು.
ಕುವೆಂಪು ಭಾಷಾ ಭಾರತಿ ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕನ್ನಡ ಸಂಸ್ಕøತಿ ಇಲಾಖೆಯಿಂದ ಮುದ್ರಿಸಲಾದ ಸುಮಾರು ಒಂದು ಲಕ್ಷ ಐದು ಸಾವಿರ ಪುಸ್ತಕಗಳು ಮಾರಾಟವಾಗದೆ ಉಳಿದಿದ್ದವು. ಅವುಗಳನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಗ್ರಂಥಾಲಯ ಇಲಾಖೆಗೆ ನೀಡಲಾಗಿದೆ.
ಕನ್ನಡ ಪುಸ್ತಕ ಪ್ರಾಧಿಕಾರದಿಂದ 300 ಶೀರ್ಷಿಕೆಯ ತಲಾ 150 ಪ್ರತಿಯಂತೆ 45 ಸಾವಿರ ಪುಸ್ತಕಗಳನ್ನು ಕುವೆಂಪು ಭಾಷಾ ಭಾರತಿ ಪ್ರಾದಿಕಾರದಿಂದ 150 ಶೀರ್ಷಿಕೆಯ ತಲಾ 200 ಪ್ರತಿಯಂತೆ 30 ಸಾವಿರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ 100 ಶೀರ್ಷಿಕೆಯ ತಲಾ 300 ಪ್ರತಿಯಂತೆ 30 ಸಾವಿರ ಪುಸ್ತಕಗಳ ಪ್ರತಿಗಳು ಸೇರಿ ಒಟ್ಟು 1.05 ಲಕ್ಷ ಪುಸ್ತಕಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಹಸ್ತಾಂತರಿಸಲಾಯಿತು.

ಜಿಲ್ಲಾ ಗ್ರಂಥಾಲಯಗಳು ನಗರ ಗ್ರಂಥಾಲಯಗಳಿಗೆ ಇವುಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತಿದೆ. ಪುಸ್ತಕಗಳನ್ನು ಮುದ್ರಿಸುವ ವ್ಯವಸ್ಥೆ ಸರ್ಕಾರದಲ್ಲಿ ಜಾರಿಯಲ್ಲಿದೆ. ಆದರೆ ಮಾರಾಟಕ್ಕೆ ಪರಿಣಾಮಕಾರಿಯಾದ ವ್ಯವಸ್ಥೆಯಿಲ್ಲ. ಹೀಗಾಗಿ ಹಲವಾರು ವರ್ಷಗಳಿಂದ ಇವು ಮಾರಾಟವಾಗದೆ ನೆನೆಗುದಿಗೆ ಬಿದ್ದಿದ್ದವು.
ಅವುಗಳನ್ನು ಗ್ರಂಥಾಲಯ ಇಲಾಖೆಗೆ ಕೊಡುವ ಮೂಲಕ ಸಾರ್ವಜನಿಕರ ಉಪಯೋಗಕ್ಕೆ ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಕನ್ನಡ ಮತ್ತು ಸಂಸ್ಕøತಿಯ ಇಲಾಖೆ ನಿರ್ದೇಶಕ ವಿಶುಕುಮಾರ್ ಸಲ್ಲಿಸಿದರು. ಅದಕ್ಕೆ ಸರ್ಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಇಂದು ಪುಸ್ತಕಗಳನ್ನು ಸಾಂಕೇತಿಕವಾಗಿ ಗ್ರಂಥಾಲಯ ಇಲಾಖೆ ನಿರ್ದೇಶಕರಿಗೆ ವಿತರಿಸಲಾಗಿದೆ.
ಇದೇ ಸಂದರ್ಭದಲ್ಲಿ ಸಚಿವೆ ಜಯಮಾಲ ಅವರು ಕನ್ನಡ ಸಂಸ್ಕøತಿ ಇಲಾಖೆಯಲ್ಲಿ ಸಹಾಯ ಕೇಂದ್ರವೊಂದನ್ನು ಉದ್ಘಾಟಿಸಿದರು.
ಬಹಳಷ್ಟು ಪುಸ್ತಕಗಳು ಮತ್ತು ಯೋಜನೆಗಳನ್ನು ಇಲಾಖೆಯಿಂದ ಡಿಜೀಟಲೀಕರಣಗೊಳಿಸಲಾಗುತ್ತಿದೆ ಮತ್ತು ಸಹಾಯಧನಕ್ಕಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಸಕಾಲ ಸೇವೆಯನ್ನು ಇಲಾಖೆ ಅನುಷ್ಠಾನಗೊಳಿಸುತ್ತಿದೆ. ಈ ಎಲ್ಲ ವಿಷಯಗಳ ಬಗ್ಗೆ ಕಲಾವಿದರಿಗೆ ಮಾಹಿತಿ ಇಲ್ಲದೆ ಪರದಾಡುವಂತಾಗಿತ್ತು. ಅದನ್ನು ತಪ್ಪಿಸಲು ಇಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕನ್ನಡಭವನ ಕಚೇರಿಯಲ್ಲಿ ಸಹಾಯಕೇಂದ್ರ ಆರಂಭಿಸಲಾಗಿದೆ ಎಂದರು.
ಇಲಾಖೆಯಿಂದ ಸೇವಾ ಸಿಂಧು ಎಂಬ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಇದರ ಜೊತೆಗೆ ಮೊಬೈಲ್ ಅಪ್ಲಿಕೇಶನ್ ಜಾರಿಗೆ ತರಲಾಗುತ್ತಿದೆ. ಸಹಾಯ ಕೇಂದ್ರದಿಂದ ಫಲಾನುಭವಿಗಳಿಗೆ ಅನುಕೂಲವಾಗುವುದಲ್ಲದೆ ಅಧಿಕಾರಿಗಳ ಸಮಯವು ಉಳಿತಾಯವಾಗಲಿದೆ ಎಂದು ಜಯಮಾಲ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ