ತಿರುವನಂತಪುರ: ಪೀಡಿತ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸುತ್ತಿದ್ದಾರೆ. ಶತಮಾನದ ಮಹಾ ಮಳೆಗೆ ನಲುಗಿರುವ ಕೇರಳದ ನೆರೆ
ಬೆಳಿಗ್ಗೆ ಕೊಚ್ಚಿಗೆ ಆಗಮಿಸಿದ ಪ್ರಧಾನಿ ತಿರುವನಂತಪುರಂಗೆ ತೆರಳಿ ಮಹತ್ವದ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡು ಪ್ರವಾಹ ಹಾನಿಯ ಬಗ್ಗೆ ವಿವರಗಳನ್ನು ಪಡೆದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಕೆ.ಜೆ.ಅಲ್ಫಾನ್ಸೋ, ರಾಜ್ಯದ ಸಚಿವರು ಮತ್ತು ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿ ವಿವರಗಳನ್ನು ನೀಡಿದರು.
ಪ್ರವಾಹ ಪರಿಸ್ಥಿತಿಯ ನೆರವಿಗಾಗಿ ಕೇಂದ್ರ ಸರ್ಕಾರದ ವತಿಯಿಂದ 500 ಕೋಟಿ ರೂಪಾಯಿ ಮಧ್ಯಂತರ ನೆರವು ಘೋಷಿಸಿರುವ ಬಗ್ಗೆ ವರದಿಯಾಗಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಟ್ವೀಟ್ ಮಾಡಿದ್ದು ‘ಕೇರಳದಲ್ಲಿ ಶತಮಾನ ಕಾಣದ ಅಂತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿ ಇದೆ. 38 ಡ್ಯಾಮ್ಗಳನ್ನು ತೆರೆಯಲಾಗಿದೆ. 324 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1500 ಗಂಜಿ ಕೇಂದ್ರಗಳಲ್ಲಿ 2,23,139 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. 71,000 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ವಿವರಗಳನ್ನು ನೀಡಿದ್ದಾರೆ.