ವಿಶ್ವ ಸಂಸ್ಥೆ:ಆ-18: ವಿಶ್ವಸಂಸ್ಥೆ ಮಾಜಿ ಮಹಾಪ್ರಧಾನ ಕಾರ್ಯದರ್ಶಿ, ನೊಬೆಲ್ ಶಾಂತಿ ಪುರಸ್ಕೃತ ಕೋಫಿ ಅನ್ನಾನ್ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ನಿಧನರಾಗಿರುವುದಾಗಿ ಕೋಫಿ ಅನ್ನಾನ್ ಫೌಂಡೇಷನ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ವಿಶ್ವದ ಪ್ರಮುಖ ಸ್ಥಾನದಲ್ಲಿ ಜವಾಬ್ದಾರಿ ನಿರ್ವಹಿಸಿದ ಮೊದಲ ಆಫ್ರಿಕನ್ ಕಪ್ಪು ವರ್ಣೀಯ ಕೋಫಿ ಅನ್ನಾನ್. ಅವರು 1997–2006ರ ವರೆಗೂ ವಿಶ್ವಸಂಸ್ಥೆಯ 7ನೇ ಮಹಾಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.
ಬಳಿಕ ಸಿರಿಯಾಗೆ ವಿಶ್ವಸಂಸ್ಥೆಯ ಶಾಂತಿ ಸಂಧಾನ ಪ್ರತಿನಿಧಿಯಾಗಿ ಸಂಘರ್ಷಕ್ಕೆ ಸೂಕ್ತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಶ್ರಮಿಸಿದ್ದರು. ಸಿರಿಯಾದಲ್ಲಿ ಉಂಟಾಗಿರುವ ಆಂತರಿಕ ಬಿಕ್ಕಟ್ಟನ್ನು ಬಗೆಹರಿಸಲು ವಿಶ್ವಸಂಸ್ಥೆ-ಅರಬ್ ಲೀಗ್ ಜಂಟಿ ಸಮಿತಿಯ ವಿಶೇಷ ಪ್ರತಿನಿಧಿಯಾಗಿ ಅನ್ನಾನ್ ಅವರನ್ನು ನೇಮಕ ಮಾಡಲಾಗಿತ್ತು.
ಜಗತ್ತಿನ ಯಾವುದೇ ಮೂಲೆಯಲ್ಲಿ ಜನರು ನೆರವಾಗಿ ಹಂಬಲಿಸುತ್ತಿದ್ದರೆ ಅಲ್ಲಿಗೆ ಅನ್ನಾನ್ ಪೂರ್ಣ ಪ್ರಯತ್ನದ ಸಹಾಯಹಸ್ತ ಚಾಚುತ್ತಿದ್ದರು.
former UN chief,Kofi Annan, dies