329 ಕೋಟಿ ಲೀಟರ್ ಎಥೆನಾಲ್ ಜೈವಿಕ ಇಂಧನ ಉತ್ಪಾದಿಸುವ ಗುರಿ

 

ಬೆಂಗಳೂರು, ಆ.17-ಈ ವರ್ಷದ ಡಿಸೆಂಬರ್‍ನಿಂದ ಮುಂದಿನ ವರ್ಷ ನವೆಂಬರ್‍ವರೆಗೆ 329 ಕೋಟಿ ಲೀಟರ್ ಎಥೆನಾಲ್ ಜೈವಿಕ ಇಂಧನ ಉತ್ಪಾದಿಸುವ ಗುರಿ ಹೊಂದಲಾಗಿದೆ. ಈ ಸಂಬಂಧ ನಿನ್ನೆ ಹಿಂದುಸ್ತಾನ್ ಪೆಟ್ರೋಲಿಯಂ ಕಾಪೆರ್Çರೇಷನ್ ಲಿಮಿಡೆಟ್(ಎಚ್‍ಪಿಸಿಎಲ್) ವತಿಯಿಂದ ನಡೆದ ಎಥೆನಾಲ್ ಉತ್ಪಾದಕರ ಸಭೆಯಲ್ಲಿ ಈ ಗುರಿಯನ್ನು ಕಾರ್ಯಗತಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಕರ್ನಾಟಕಕ್ಕೆ ವಾರ್ಷಿಕ 2.78 ಕೋಟಿ ಲೀಟರ್‍ಗಳ ಎಥೆನಾಲ್ ಅಗತ್ಯವಿದ್ದು, ಈ ಬೇಡಿಕೆಯನ್ನು ಪೂರೈಸಲು ಅರ್ಹ ಉತ್ಪಾದಕರಿಂದ ಟೆಂಡರ್‍ಗಳನ್ನು ಆಹ್ವಾನಿಸಲಾಗಿದೆ.

ಸಾರ್ವಜನಿಕ ವಲಯದ ಉದ್ದಿಮೆ ಒಎಂಜಿ ಕಚ್ಚಾ ತೈಲ ಆಮದು ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎಥೆನಾಲ್ ಅಂಶ ಇರುವ ಪೆಟ್ರೋಲ್(ಇಬಿಪಿ) ಯೋಜನೆ ಜಾರಿಯನ್ನು ಅನುಷ್ಠಾನಗೊಳಿಸುತ್ತಿದೆ.
ಸಿ-ಹೆಮಿ, ಬಿ-ಹೆವಿ ಕಾಕಂಬಿಗಳು/ಕಬ್ಬಿನ ರಸ/ಹಾನಿಗೀಡಾದ ದವಸ ಧಾನ್ಯಗಳು(ಮಾನವ ಸೇವೆಗೆ ಯೋಗ್ಯವಲ್ಲದ್ಧು) ಇವುಗಳಿಂದ ಪರಿಸರ ಸ್ನೇಹಿ ಮತ್ತು ಜೈವಿಕ ಎಥೆನಾಲ್ ಉತ್ಪಾದಿಸುವ ಸಂಸ್ಥೆಗಳೊಂದಿಗೆ ನಿನ್ನೆ ನಡೆದ ಸಭೆಯಲ್ಲಿ ಯೋಜನೆ ಅನುಷ್ಠಾನ ಕುರಿತು ಮಹತ್ವದ ಚರ್ಚೆ ನಡೆಸಲಾಗಿದೆ ಎಂದು ಎಚ್‍ಪಿಸಿಎಲ್ ಪ್ರಕಟಣೆ ತಿಳಿಸಿದೆ.
ಕಚ್ಚಾ ತೈಲಗಳ ಆಮದು ವೆಚ್ಚ ತಗ್ಗಿಸುವುದು, ವಾಹನಗಳ ಮಾಲಿನ್ಯ ತಡೆಗಟ್ಟುವುದು, ಕೃಷಿಕರಿಗೆ ಹೆಚ್ಚಿನ ವರಮಾನ ತಂದು ಕೊಡುವುದು, ಗ್ರಾಮೀಣ ಆದಾಯ ಹೆಚ್ಚಿಸುವುದು, ನವೀಕರಿಸಬಹುದಾದ ಇಂಧನ ತಯಾರಿಸುವ ಉದ್ದಿಮೆಗಳಿಗೆ ಉತ್ತೇಜನ ನೀಡುವುದು. ಹಾಗೂ ಇಂಧನ ಭದ್ರತೆ ಮತ್ತು ಸುರಕ್ಷತೆ- ಈ ಯೋಜನೆಯ ಆದ್ಯ ಉದ್ದೇಶಗಳಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ