ಯಾರ್ಯಾರೋ ಸತ್ರು
ಇಷ್ಟು ಜನ ಮಕ್ಕಳನ್ನು ,ಮೊಮ್ಮಕ್ಕಳನ್ನು ,ಇಷ್ಟು ಆಸ್ತಿಯನ್ನು ಬಿಟ್ಟು ಹೋದರು ಅಂತ ನ್ಯೂಸ್ ಲಿ ಬರ್ತಿತ್ತು.
ಇಬ್ರು ಸತ್ತರು ಏನನ್ನು ಬಿಟ್ಟು ಹೋಗಲಿಲ್ಲ ಶೋಕದ ಹೊರತು.
ಗಳಿಸಿದ್ದು ಅಪಾರ ಪ್ರೀತಿ ಅಭಿಮಾನ ಪಕ್ಷಾತೀತವಾಗಿ .
ಈ ಇಬ್ಬರು ದೇಶವನ್ನೇ ಮನೆ ಮಾಡಿಕೊಂಡು,ಜನರನ್ನೇ ಸಂಬಂಧಿ ಮಾಡಿಕೊಂಡಿದ್ರು .
ಒಬ್ಬರು ಕಲಾಮ್ ಮತ್ತೊಬ್ಬರು ಅಟಲ್ ಜಿ..
ನಾವು ಮಹಾತ್ಮ ಗಾಂಧಿಯನ್ನು ಕಂಡಿಲ್ಲ, ಆದರೆ ನಾವು ಕಂಡ ಮಹಾತ್ಮರು ಇನ್ನಿಲ್ಲ….
ಅಟಲ್ಜೀ ಹಾಗೂ ಕಲಾಮ್ ಅವರ ಬಾಂಧವ್ಯ ಮತ್ತು ಅಟಲ್ಜೀ ತಮಾಷೆ ವ್ಯಕ್ತಿತ್ವದವರು ಅನ್ನೊದಕ್ಕೆ ಒಂದು ಸಣ್ಣ ಘಟನೆ ಹೇಳ್ತೀನಿ .
ಅಟಲ್ಜೀ ಅಧೀಕಾರಕ್ಕೆ ಬರುವಾಗಲೇ ಈ ದೇಶವನ್ನು ಪರಮಾಣು ಶಕ್ತ ರಾಷ್ಟ್ರವನ್ನಾಗಿ ಮಾಡ್ತೀನಿ ಅಂತ ಹೇಳಿದ್ದರು ಅದಕ್ಕೆ ಕಲಾಮ್ ರವರನ್ನು ಕರೆಸಿ ಕೇಳಿದ್ರಂತೆ ಅದ್ಕೆ ನೀವ್ ಏನು ತಲೆ ಕಡ್ಸ್ಕೊಬೇಡಿ ನೀವೂ ಅಧಿಕ್ಕಾರಕ್ಕೆ ಬರುತ್ತೀರ ಅಂತ ಗೊತ್ತಿದ್ದು ಮತ್ತೆ ಆ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಅಂತ ತಿಳಿದು ನಾನು ಎಲ್ಲಾ ವ್ಯವಸ್ಥೆ ಮಾಡದ್ದೀನಿ ಇನ್ನೊಂದು 6ತಿಂಗಳು ಕಾಲವಕಾಶ ಕೊಡಿ ಸಾಕು ಅಂದ್ರಂತೆ ಆಗ ಅಟಲ್ಜೀ ಆಯ್ತು ಮಾಡಿ ನನ್ನಿಂದ ಏನು ಸಹಾಯ ಆಗುತ್ತೋ ನಾನು ಮಾಡ್ತೀನಿ ಅಂದ್ರು . ಆಗ ಕಲಾಮ್ ಇಲ್ಲಿ ಒಂದು ಸಮಸ್ಯೆ ಇದೆ ಈ ಮಾಹಿತಿ ಎಲ್ಲೂ leak out ಆಗಬಾರದು ಯಾಕೆ ಅಂದರೆ America ಗೆ ಗೊತ್ತಾದರೆ ನಮ್ಮ ಮೇಲೆ ಒತ್ತಡ ಹೇರಿ ಈ ಕೆಲಸ ಮಾಡಲು ಬಿಡಲ್ಲ ಅಂತ.
ಆಗ ಅಟಲ್ ಜೀ ಹೇಳಿದ್ರಂತೆ ನೀವು ಅದರ ಬಗ್ಗೆ ಚಿಂತೆ ಬೇಡ ಎಲ್ಲೂ ವಿಷಯ leak out ಆಗಲ್ಲ ಯಾಕೆ ಅಂದರೆ
” ನನಗೂ ಮದುವೆ ಆಗಿಲ್ಲ , ನಿಮಗೂ ಮದುವೆ ಆಗಿಲ್ಲ” ಮತ್ತೆ ವಿಷಯ leak out ಆಗೋದು ಹೇಗೆ ಅಂತ.