ಶಂಶೋಧನೆಗೆ ಅರ್ಜಿ ಆಹ್ವಾನ

ಬೆಂಗಳೂರು,ಆ.16- ಬೆಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಐಸಿಎಸ್‍ಎಸ್‍ಆರ್ ಪ್ರಾಯೋಜಿತ ಸಂಶೋಧನಾ ಯೋಜನೆಯಡಿ ರಿಸರ್ಚ್ ಅಸೋಸಿಯೇಟ್ ಮತ್ತು ರಿಸರ್ಚ್ ಅಸಿಸ್ಟೆಂಟ್ ಅಭ್ಯರ್ಥಿಯಾಗಿ ಕಾರ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಎಂಎಸ್ಸಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಆ.21ರೊಳಗೆ ಅರ್ಜಿ ಸಲ್ಲಿಸಬಹುದು.
ರಿಸರ್ಚ್ ಅಸೋಸಿಯೇಟ್ ಅಭ್ಯರ್ಥಿಗೆ 16,000 ರೂ. ಹಾಗೂ ರಿಸರ್ಚ್ ಅಸಿಸ್ಟೆಂಟ್ ಅಭ್ಯರ್ಥಿಗೆ 13,000 ರೂ. ವೇತನ ನೀಡಲಾಗುವುದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಸ್ವವಿವರಗಳನ್ನೊಳಗೊಂಡಲ್ಲಾ ಮೂಲ ದಾಖಲೆಗಳ ದೃಢೀಕೃತ ನಕಲು ಪ್ರತಿಗಳ ಜೊತೆ ಅರ್ಜಿಯನ್ನು ಪೆÇ್ರ.ರಮೇಶ್, ಪ್ರಾಧ್ಯಾಪಕರು ಮತ್ತು ಯೋಜನಾ ನಿರ್ದೇಶಕರು, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಬೆಂಗಳೂರು-56 ಈ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ