ಅದಮ್ಯ ಚೇತನದಿಂದ ಪರಿಸರ ವಿಜ್ಞಾನ ಪರೀಕ್ಷೆ

 

ಬೆಂಗಳೂರು,ಆ.16- ಅದಮ್ಯ ಚೇತನ ಸಂಸ್ಥೆ ಕಳೆದ ವರ್ಷದಂತೆ ಈ ವರ್ಷವು ಪರಿಸರ ವಿಜ್ಞಾನ ಪರೀಕ್ಷೆಯನ್ನು ಸೆ.2ರಂದು ನಡೆಸಲಿದೆ.
ಕೇಂದ್ರ ಸಚಿವರಾದ ಅನಂತಕುಮಾರ್ ಮಾರ್ಗದರ್ಶನದಲ್ಲಿ ಪರಿಸರ ರಕ್ಷಣೆಯ ಬಗ್ಗೆ ತಿಳುವಳಿಕೆ ಮೂಡಿಸಲು ಪರಿಸರ ವಿಜ್ಞಾನ ಪರೀಕ್ಷೆಯನ್ನು ಆಯೋಜಿಸಿದೆ.
ಈ ಪರಿಸರ ವಿಜ್ಞಾನ ಪರೀಕ್ಷೆಯು ನೀರು, ಸಸ್ಯ, ಪಕ್ಷಿ, ಚಿಟ್ಟೆ, ಆಹಾರ ಮೈಲಿಗಳ ಬಗ್ಗೆ ಪರಿಸರ ವಿಜ್ಞಾನಕ್ಕೆ ಪೂರಕವಾದ ವಿಷಯಗಳನ್ನು ಒಳಗೊಂಡಿರುತ್ತದೆ. ಹಿಂದಿನ ವರ್ಷ 1200ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುವರು. ಈ ವರ್ಷ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪರಿಸರ ಮತ್ತು ವಿಜ್ಞಾನದ ಬಗ್ಗೆ ಪರೀಕ್ಷಾ ಕೈಪಿಡಿ ಹಾಗೂ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು.
8ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಸೇರಿದಂತೆ ಯಾರಾದರೂ ಪರೀಕ್ಷೆ ಬರೆಯಬಹುದಾಗಿದೆ. ಆ.20ರೊಳಗೆ ಪರೀಕ್ಷೆ ಬರೆಯುವ ಆಸಕ್ತರು ನೋಂದಣಿ ಮಾಡಿಸಿಕೊಳ್ಳಬೇಕು. ಆನ್‍ಲೈನ್ ಮೂಲಕ ನೋಂದಾಯಿಸಬಹುದಾಗಿದ್ದು, hಣಣಠಿ://biಣ.ಟಥಿ/ಓSಂಖಿ2018 ಅಥವಾ ಮೊ: 98455-15726ಗೆ ಸಂಪರ್ಕಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ