ಸಂವಿಧಾನದ ಪ್ರತಿ ಸುಟುವರ ವಿರುದ್ಧ ಪ್ರತಿಭಟನಾ ಸಭೆ

 

ಬೆಂಗಳೂರು,ಆ.16- ಸಂವಿಧಾನದ ಪ್ರತಿಯನ್ನು ಸುಟ್ಟು ಇಡೀ ದೇಶಕ್ಕೆ ಅವಮಾನ ಮಾಡಿರುವವರ ವಿರುದ್ಧ ನಾಳೆ(ಆ.17) ಪ್ರತಿಭಟನಾ ಸಭೆ ಹಮ್ಮಿಕೊಂಡಿರುವುದಾಗಿ ಪ್ರಜಾ ಪರಿವರ್ತನೆ ಪಾರ್ಟಿ ರಾಷ್ಟ್ರಾಧ್ಯಕ್ಷ ಬಿ.ಗೋಪಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನವು ಪ್ರಪಂಚದಲ್ಲೇ ಅತ್ಯುನ್ನತ ಸಂವಿಧಾನವಾಗಿದೆ. ಪ್ರಪಂಚದಲ್ಲಿನ 150 ರಾಷ್ಟ್ರಗಳು ಬಾಬಾ ಸಾಹೇಬರು ರಚಿಸಿದ ಸಂವಿಧಾನವನ್ನು ಒಪ್ಪಿಕೊಂಡಿದ್ದಾರೆ. ಸ್ವಾತಂತ್ರ್ಯ, ಸಮಾನತೆ, ಸೋದರತ್ವ ಮತ್ತು ವೈಜ್ಞಾನಿಕಮನೋಭಾವದ ತಳಹದಿಯ ಮೇಲೆ ರೂಪುಗೊಂಡಿದೆ. ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕು, ಧಾರ್ಮಿಕ ಹಕ್ಕು, ಶೋಷಣಾರಹಿತ ವ್ಯವಸ್ಥೆ ಮತ್ತು ದೀನದಲಿತರಿಗೆ, ಸ್ತ್ರೀಯರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಸಂವಿಧಾನವಾಗಿದೆ ಎಂದರು.

ಇದನ್ನು ಸಹಿಸದ ಕೆಲವರು ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇಂಥವರ ವಿರುದ್ದ ಘೋಷಣೆಗಳನ್ನು ಕೂಗಿ ಇಡೀ ದೃಶ್ಯಾವಳಿಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೂತ್ ಫಾರ್ ಈಕ್ವಾಲಿಟಿ ಮತ್ತು ಅಜಾದ್ ಸೇನಾ ಎಂಬ ಸಂಘಟನೆಗಳ ಕಾರ್ಯಕರ್ತರು ಇಂತಹ ಕೆಟ್ಟ ಕೆಲಸ ಮಾಡಿದ್ದಾರೆ ಎಂದು ದೂರಿದರು. ಇವರ ವಿರುದ್ದ ಅಖಿಲ ಭಾರತೀಯ ಭೀಮ ಸೇನಾದವರು ದೆಹಲಿ ಪೆÇಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರೂ ಇದುವರೆಗೂ ಅವರನ್ನು ಬಂಧಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂಥ ದೃಷ್ಕøತ್ಯ ಎಸಗಿದವರಿಗೆ ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆ ನೀಡದಿದ್ದರೆ ನಾಳೆ ಬೆಳಗ್ಗೆ 11 ಗಂಟೆಗೆ ನಗರ ಟೌನ್‍ಹಾಲ್ ಮುಂಭಾಗ ಸಾಂಕೇತಿಕವಾಗಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಭೀಮ ಸೇನೆ ರಾಜ್ಯಾಧ್ಯಕ್ಷ ಮುನಿವೆಂಕಟಪ್ಪ, ಪ್ರಜಾ ಪರಿವರ್ತನಾ ಪಾರ್ಟಿಯ ಕಾರ್ಯದರ್ಶಿ ಕಾಂತಾ ಅಲ್ಲಾರಿಯಾ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ