ಬೆಂಗಳೂರು, ಆ.16- ಬಿಬಿಎಂಪಿ ಪೌರಕಾರ್ಮಿಕ ಮಧ್ಯಾಹ್ನದ ಬಿಸಿಯೂಟದಲ್ಲಿ ನೀಡಲಾಗುವ ಸಾಂಬಾರ್‍ನಲ್ಲಿ ಇಲಿ ಬಿದ್ದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಕುರಿತಂತೆ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.
ಆದರೆ ಈ ಪ್ರಕರಣದಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಾಂಬಾರ್‍ನಲ್ಲಿ ಸತ್ತ ಇಲಿಯನ್ನು ಹಾಕಿದ್ದಾರೆ ಎಂದು ಊಟ ವಿತರಿಸುವ ಹೊಣೆ ಹೊತ್ತಿರುವ ಗುತ್ತಿಗೆಸಂಸ್ಥೆ ಸ್ಪಷ್ಟನೆ ನೀಡಿದೆ.
ಇಲಿ ಬಿದ್ದಿತ್ತು ಎನ್ನಲಾದ ಸಾಂಬಾರನ್ನು ಸ್ನೇಹಾ ಟೆಸ್ಟ್ ಹೌಸ್‍ಗೆ ಕಳುಹಿಸಲಾಗಿತ್ತು. ಈ ಸಂಸ್ಥೆ ಪರೀಕ್ಷಾ ವರದಿಯನ್ನು ಸಲ್ಲಿಸಿದ್ದು, ಪೌರ ಕಾರ್ಮಿರಿಗೆ ವಿತರಿಸಲಾದ ಸಾಂಬಾರ್‍ನಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ವರದಿ ನೀಡಿದೆ.
ಕಳೆದ 11ರಂದು ಗಾಯತ್ರಿನಗರದ ಪೌರಕಾರ್ಮಿಕರಿಗೆ ಉತ್ತಮ ದರ್ಜೆಯ ಊಟವನ್ನೇ ಸರಬರಾಜು ಮಾಡಲಾಗಿತ್ತು. ಆದರೆ ಕೆಲವರು ದುರುದ್ದೇಶದಿಂದ ಸಾಂಬಾರ್‍ನಲ್ಲಿ ಸತ್ತ ಇಲಿಯನ್ನು ಹಾಕಿ ನಮ್ಮ ಸಂಸ್ಥೆಗೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದ್ದಾರೆ ಎಂದು ಚೆಪ್ ಟಾಕ್ ಸಂಸ್ಥೆ ಪೆÇಲೀಸರಿಗೆ ದೂರು ನೀಡಿದೆ.