ಅಟಲ್ ಜಿ ಆರೋಗ್ಯ ಸುಧಾರಿಸಲಿ: ಶೆಟ್ಟರ

ಹುಬ್ಬಳ್ಳಿ: ಅಟಲ್ ಬಿಹಾರಿ ವಾಜಪೇಯಿ ನಮ್ಮ ಜೊತೆ ಇನ್ನೂ ಇರಬೇಕು. ಅವರ ಆರೋಗ್ಯ ಶೀಘ್ರ ಚೇತರಿಸಿಕೊಳ್ಳಲಿ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ ಹೇಳಿದರು. ಹುಬ್ಬಳ್ಳಿಯಲ್ಲಿ ಮಾದ್ಯಮಕ್ಕೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು ಧೀಮಂತ ನಾಯಕ, ವಿಶೇಷ ವ್ಯಕ್ತಿತ್ವವನ್ನ ಹೊಂದಿದವರು. ಹುಬ್ಬಳ್ಳಿಗೆ ಅವರಿಗೆ ಬಹಳಷ್ಟು ನಂಟಿದೆ. ಕಳೆದ ನಲವತ್ತು ವರ್ಷಗಳಿಂದ ಹುಬ್ಬಳ್ಳಿಗೆ ಬರುತ್ತಿದ್ದರು. ನಗರದ ಟೌನಹಾಲ್ ನಲ್ಲಿ ಸಂಘದ ಡ್ಗಣವೇಅಸಲ್ಲಿ ಸಭೆ ನಡೆಸಿದ್ದರು, ಆ ರೀತಿ ಸಿಸ್ಥಿನ ಸಿಪಾಯಿಯಂತೆ ಕೆಲಸ ಮಾಡುತ್ತಿದ್ದರು ಎಂದರು. ಮೊದಲು ಶಾಸಕನಾಗಿ ಆಯ್ಕೆ ಯಾಗಲು ಅವರೇ ಕಾರಣ. ಅವರು ಮಾಡಿದ ಸಾರ್ವಜನಿಕ ಸಭೆಯಿಂದ ನಾನು ಗೆಲವು ಕಂಡಿದ್ದೆ. ಕರ್ನಾಟಕಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆ ಬಹಳಷ್ಟಿದೆ. ರೈಲ್ವೆ ಜೋನಲ್ ಕಚೇರಿ ಹುಬ್ಬಳ್ಳಿಯಲ್ಲಿ ನಿರ್ಮಾಣವಾಗಲು ಕಾರಣವಾದವರು ಅಟಲ್ ಬಿಹಾರಿ ವಾಜಪೇಯಿ ಎಂದರು. 2003 ರಲ್ಲಿ ಹುಬ್ಬಳ್ಳಿಯ ರೇಲ್ವೆ ಜೋನಲ್ ಅಡಿಗಲ್ಲು ಸಮಾರಂಭಕ್ಕೆ ಬರಲು ಅನೇಕ ಅಡತಡೆಗಳು ಇದ್ದವು, ಅದನ್ನ ಮೀರಿ ನಗರಕ್ಕೆ ಬಂದಿದ್ದರು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ