ಕಾಬೂಲ್, ಆ.15-ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಪ್ರಾಬಲ್ಯ ಮತ್ತು ಅಟ್ಟಹಾಸ ಮುಂದುವರಿದಿದೆ. ದೇಶದ ಉತ್ತರ ಭಾಗದ ಎರಡು ತಪಾಸಣಾ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬಂಡುಕೋರರು 30ಕ್ಕೂ ಹೆಚ್ಚು ಯೋಧರು ಮತ್ತು ಪೆÇಲೀಸರ ನರಮೇಧ ನಡೆಸಿದ್ದಾರೆ. ಈ ಕೃತ್ಯದಲ್ಲಿ ಭದ್ರತಾಪಡೆಯ ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ.
ಉತ್ತರ ಆಫ್ಘಾನಿಸ್ತಾನದ ಕೆಲವು ಭಾಗಗಳನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಯತ್ನಿಸುತ್ತಿರುವ ತಾಲಿಬಾನ್ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಕಾಳಗ ಮುಂದುವರಿದಿದ್ದು, ಸಾವು-ನೋವಿನ ವರದಿಗಳಿವೆ.
ತಾಲಿಬಾನ್ ಬಂಡುಕೋರರ ಉಪಟಳ ಹೆಚ್ಚಾಗಿರುವುದರಿಂದ ಅವರನ್ನು ನಿಗ್ರಹಿಸಲು ಯೋಧರು ಮತ್ತು ಪೆÇಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ಗುಂಡಿನ ಕಾಳಗದಿಂದ ನಾಗರಿಕರು ಭಯಭೀತರಾಗಿದ್ದಾರೆ.
ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳ ಬೆಂಬಲದೊಂದಿಗೆ ಮತ್ತೆ ಚಿಗುತುಕೊಂಡಿರುವ ತಾಲಿಬಾನಿಗಳನ್ನು ಮಟ್ಟ ಹಾಕಲು ಹೆಚ್ಚುವರಿ ಸೇನಾಪಡೆಯನ್ನು ನಿಯೋಜಿಸಲಾಗಿದೆ.