ಮಹಾಯೋಗಿ ಅರವಿಂದ ಘೋಷ್ ಅವರ 146ನೇ ಜನ್ಮ ಜಯಂತಿ

ಕೋಲ್ಕತಾ/ಪುದುಚೇರಿ, ಆ.15-ಸ್ವಾತಂತ್ರ್ಯ ಹೋರಾಟಗಾರ, ತತ್ವಜ್ಞಾನಿ ಮತ್ತು ಮಹಾಯೋಗಿ ಅರವಿಂದ ಘೋಷ್ ಅವರ 146ನೇ ಜನ್ಮ ಜಯಂತಿ ಯನ್ನು ದೇಶದ ವಿವಿಧೆಡೆ ಇಂದು ಭಕ್ತಿಭಾವದೊಂದಿಗೆ ಆಚರಿಸಿ, ಗೌರವಾಂಜಲಿ ಸಲ್ಲಿಸಲಾಯಿತು.
ಪಶ್ಚಿಮ ಬಂಗಾಳ ಮತ್ತು ಪುದುಚೇರಿ ಸೇರಿದಂತೆ ಇಂದು ವಿವಿಧೆಡೆ ಅರವಿಂದರ ಜನ್ಮ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳು ನಡೆದವು.
ಪುದುಚೇರಿಯ ಅರಬಿಂದೋ ಆಶ್ರಮಕ್ಕೆ ಇಂದು ಮುಂಜಾನೆಯಿಂದಲೇ ನೂರಾರು ಭಕ್ತರು ಆಗಮಿಸಿ ಮಹಾ ಪುರುಷನ ಸ್ಮಾರಕದ ಮುಂದೆ ಧ್ಯಾನ ಮಾಡಿದರು.
ಪೂರ್ಣಯೋಗ ಮಾರ್ಗವನ್ನು ಜಗತ್ತಿಗೆ ತೋರಿಸಿದ ಮಹಾಯೋಗಿ ಅರವಿಂದರು 15ನೇ ಅಗಸ್ಟ್ 1872ರಲ್ಲಿ ಅಗಿನ ಕಲ್ಕತ್ತದಲ್ಲಿ ಜನಿಸಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಆಧ್ಯಾತ್ಮಿಕ ಧುರೀಣರೂ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ