
ನವದೆಹಲಿ: ಆ.14 ರಂದು ಬೆಳಿಗ್ಗೆ ಪ್ರಾರಂಭವಾದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ದಾಖಲೆಯ ಕುಸಿತ ಕಂಡಿದ್ದು, ಒಂದು ಡಾಲರ್ 70 ರೂಪಾಯಿಗಳಿಗೆ ಸಮನಾಗಿದೆ.
ಟರ್ಕಿಯಲ್ಲಿ ಆರ್ಥಿಕ ಅಸ್ಥಿರತೆ ಉಂಟಾಗಿದ್ದು, ಇದು ರೂಪಯಿ ಮೌಲ್ಯ ಸೇರಿದಂತೆ ಜಗತ್ತಿನ ಎಲ್ಲಾ ಪ್ರಮುಖ ದೇಶಗಳ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಪ್ರಾರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 23 ಪೈಸೆಯಷ್ಟು ರೂಪಾಯಿಯ ಮೌಲ್ಯ ಚೇತರಿಸಿಕೊಂಡಿತ್ತು. ಆದರೆ ನಂತರ 70 ರೂಪಾಯಿಗಳಿಗೆ ತಲುಪಿದೆ.
ಆ.13 ರಂದು 5 ವರ್ಷಗಳಲ್ಲಿ ಮೊದಲ ಬಾರಿಗೆ ಅತಿ ಹೆಚ್ಚು ಪ್ರಮಾಣದಲ್ಲಿ ಅಂದರೆ 110 ಪೈಸೆಯಷ್ಟು ಕುಸಿದು, ರೂಪಾಯಿ ಮೌಲ್ಯ, 69.93 ರೂಪಾಯಿಗಳಿಗೆ ಕುಸಿದಿತ್ತು.