ಅಲಂಕಾರಿಕ ಕೇಕ್‍ಗಳ ಪ್ರದರ್ಶನದಲ್ಲಿ ಯುವ ಜನತೆ ಉತ್ಸಾಹ

 

ಯಲಹಂಕ, ಆ.14- ಬೇಕರಿ ಉದ್ಯಮವನ್ನು ಪೆÇ್ರೀ ಸಲುವಾಗಿ ಇಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಅಲಂಕಾರಿಕ ಕೇಕ್‍ಗಳ ಪ್ರದರ್ಶನದಲ್ಲಿ ಯುವ ಜನತೆ ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಾಳೆ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಬಗೆಯ ಕೇಕ್‍ಗಳನ್ನು ಹಸಿರು, ಬಿಳಿ ಹಾಗೂ ಕೇಸರಿ ಬಣ್ಣವನ್ನು ಬಳಸಿ ವಿಶೇಷವಾಗಿ ಸಿದ್ಧಪಡಿಸಲಾಗಿತ್ತು. ಅದರಲ್ಲೂ ಗಣೇಶನಿಗೆ ಪ್ರಿಯವಾದ ಮೋದಕವನ್ನು ತ್ರಿವರ್ಣದಿಂದ ತಯಾರಿಸಿದ ಕೇಕ್ ಅತ್ಯಾಕರ್ಷಕವಾಗಿತ್ತು.

ತಾಜಾ ಹಣ್ಣುಗಳನ್ನು ಬಳಸಿ ಕೇಕ್‍ಗಳನ್ನು ಶೃಂಗರಿಸಲಾಗಿತ್ತು. ಆಧುನಿಕ ತಂತ್ರಜ್ಞಾನ ಬಳಸಿ ಹೇಗೆ ಬೇಕರಿ ಉತ್ಪನ್ನಗಳನ್ನು ತಯಾರಿಸುವುದು, ಇದರಿಂದ ಆಗುವ ಲಾಭ, ಪ್ರಯೋಜನ ಕುರಿತು ಇಂದು ಒಂದು ದಿನದ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿತ್ತು.
ಬೇಕರಿ ತರಬೇತಿ ಕೇಂದ್ರ, ಕೃಷಿ ವಿಸ್ತರಣಾ ನಿರ್ದೇಶನಾಲಯವು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಲಂಕಾರಿಕ ಕೇಕ್‍ಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿದ್ದವು.

ಸಾವಯವ ಪದಾರ್ಥಗಳನ್ನು ಬಳಸಿ ವಿವಿಧ ಬಿಸ್ಕೆಟ್‍ಗಳನ್ನು ಸಿದ್ದಪಡಿಸಲಾಗಿದೆ. ಬಗೆ ಬಗೆಯ ಚಾಕೋಲೇಟ್‍ಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ತಿನಿಸುಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಹಸಿರು, ಬಿಳಿ, ಕೇಸರಿ ಬಣ್ಣದಿಂದ ಸಿದ್ದಪಡಿಸಿದ ವಿವಿಧ ಕೇಕುಗಳು ಎಲ್ಲರ ಗಮನ ಸೆಳೆದವು. ವಿದ್ಯಾರ್ಥಿಗಳು ತಿನಿಸುಗಳನ್ನು ಕೊಂಡು ಸವಿದರು.
ಕೃಷಿ ವಿವಿ ಕುಲಪತಿ ಡಾ.ಎಂ.ಎಸ್.ನಟರಾಜು ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಂಯೋಜಕ ಡಾ.ಎಸ್.ವಿ.ಸುರೇಶ್ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ