“ಬಹಳಷ್ಟು ಮಂದಿ ಉತ್ತಮ ಕಥೆಗಳೊಂದಿಗೆ ನನ್ನ ಬಳಿಗೆ ಬರುತ್ತಿದ್ದಾರೆ. ಆದರೆ ನಾನು ಒಪ್ಪಿಕೊಳ್ಳಲಿಲ್ಲ. ಅದು ಸಂಪೂರ್ಣ ನನ್ನ ವೈಯಕ್ತಿಕ ನಿರ್ಧಾರ. ನನ್ನ ಹಿರಿ ಮಗಳು ಜಾಹ್ನವಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈಗವಳು ತುಂಬಾ ಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕಾಗಿದೆ. ಇಂತಹ ಸಮಯದಲ್ಲಿ ತಾಯಿಯಾಗಿ ತಾನು ಅವಳೊಂದಿಗೆ ಇರುವುದು ಅಗತ್ಯ. ತಾಯಿಯಾಗಿ ನನ್ನ ಜವಾಬ್ದಾರಿ ನೆರವೇರಿಸುವುದೇ ನನ್ನ ಮೊದಲ ಆದ್ಯತೆ” ಎಂದಿದ್ದರು.
ಶ್ರೀದೇವಿ ಅಭಿನಯದ ಕೊನೆಯ ಸಿನಿಮಾ ‘ಮಾಮ್’. ಶ್ರೀದೇವಿ ತನ್ನ ಹಿರಿಮಗಳು ಜಾಹ್ನವಿ ಕಪೂರ್ಬಾಲಿವುಡ್ ಪ್ರವೇಶದ ಬಗ್ಗೆ ಸಾಕಷ್ಟು ಕುತೂಹಲದಿಂದ ಎದುರು ನೋಡುತ್ತಿದ್ದರು. ಆದರೆ ಆ ಕನಸು ನನಸಾಗುವ ಸಮಯಕ್ಕೆ ಅವರು ಅಚಾನಕ್ ಆಗಿ ಮೃತಪಟ್ಟರು.
ಇಂದು ಶ್ರೀದೇವಿ 55ನೇ ಹುಟ್ಟುಹಬ್ಬ. ಈ ಹಿಂದೆ ಒಮ್ಮೆ ಮಾತನಾಡುತ್ತಾ, ಖುಷಿಗಿಂತಲೂ ಜಾಹ್ನವಿಗೇ ತನ್ನ ಅಗತ್ಯ ಹೆಚ್ಚು ಎಂದಿದ್ದರು. ಜಾಹ್ನವಿ ಸಹ ತನ್ನ ತಾಯಿ ಮೃತಪಟ್ಟ ಬಳಿಕ, “ತಾನು ಇದುವರೆಗೂ ಯಾವ ಮೇಲೂ ಅಷ್ಟಾಗಿ ಆಧಾರಪಡಲಿಲ್ಲ. ಯಾಕೆಂದರೆ ನನಗೆ ಬೇಕಾಗಿದ್ದೆಲ್ಲವನ್ನೂ ಕೊಡುತ್ತಿದ್ದ ಏಕೈಕ ವ್ಯಕ್ತಿ, ನನ್ನ ಜೀವದ ಗೆಳತಿ ನೀನೇ ಅಮ್ಮ” ಎಂದು ಪೋಸ್ಟ್ ಮಾಡಿದ್ದರು. ಇಂದು ಶ್ರೀದೇವಿ ಹುಟ್ಟುಹಬ್ಬದ ನಿಮಿತ್ತ ಜಾಹ್ನವಿ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದಾರೆ.