ಮಾರುಕಟ್ಟೆ ವಹಿವಾಟು: ಜುಲೈ ತಿಂಗಳಿನಲ್ಲಿ ಹಣದುಬ್ಬರ ಶೇ. 4.17ಕ್ಕೆ ಇಳಿಕೆ, 9 ತಿಂಗಳಲ್ಲೇ ಕನಿಷ್ಟ

ನವದೆಹಲಿ: ತರಕಾರಿ ಮತ್ತು ಹಣ್ಣುಗಳ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಜುಲೈ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ 4.17 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರಿ ಅಂಕಿಅಂಶಗಳು ಹೇಳಿದೆ.
ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಆಧಾರದ ಮೇಲೆ, ಜೂನ್ ತಿಂಗಳಿನಲ್ಲಿ ಸಹ ಹಣದುಬ್ಬರ ಪ್ರಮಾಣ ಇಳಿಕೆಯಾಗಿದೆ. ಹಣದುಬ್ಬರವು ಅಂದಾಜು ಶೇ .5 ರಿಂದ ಶೇ 4.92 ಕ್ಕೆ ಇಳಿದಿದೆ ಎಂದು ಸೋಮವಾರ ಬಿಡುಗಡೆಯಾಗಿರುವ ಸೆಂಟ್ರಲ್ ಸ್ಟ್ಯಾಟಿಸ್ಟಿಕ್ಸ್ ಆಫೀಸ್ (ಸಿ.ಎಸ್.ಓ) ಡೇಟಾದಲ್ಲಿ ವಿವರಿಸಲಾಗಿದೆ.
ಆದರೆ ಕಳೆದ ವರ್ಷದ ಜುಲೈ ಹಣದುಬ್ಬರಕ್ಕೆ ಹೋಲಿಸಿದ್ದಾದರೆ ಈ ಭಾರಿ ಹಣದುಬ್ಬರ ಪ್ರಮಾಣ ಶೇ.2.36 ರಷ್ಟು ಹೆಚ್ಚಾಗಿದೆ. ಅಲ್ಲದೆ ಇದಕ್ಕೂ ಮುನ್ನ  ಅಕ್ಟೋಬರ್ 2017 ರಲ್ಲಿ  ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ  3.58ರಷ್ಟಕ್ಕೆ ಇಳಿದು ದಾಖಲೆ ಬರೆದಿತ್ತು.
ಇನ್ನು ಜೂನ್ ತಿಂಗಳಿನಲ್ಲಿ ಶೇ. 7.8 ರಷ್ಟು ಇದ್ದ ತರಕಾರಿ ಹಣ್ಭದುಬ್ಬರ ಈ ಬಾರಿ ಶೇ. 2.19 ರಷ್ಟು ಕುಸಿದಿದೆ ಎಂದು ಸಿಎಸ್ಒ ಅಂಕಿ ಅಂಶ ಬಹಿರಂಗಪಡಿಸಿದೆ. ಹಣ್ಣುಗಳ ಬೆಲೆ ಏರಿಕೆ ದರವು ಶೇ 6.98 ಕ್ಕೆ ಕುಸಿದಿದ್ದರೆಮಾಂಸ ಮತ್ತು ಮೀನುಗಳಂತಹ ಪ್ರೋಟೀನ್ ಸಮೃದ್ಧ ವಸ್ತುಗಳ ಹಣದುಬ್ಬರ, ಹಾಲಿನ ಬೆಲೆಯ ಮೇಲಿನ ಹಣದುಬ್ಬರ ಸಹ ಕುಸಿತವಾಗಿದೆ.
ಆದಾಗ್ಯೂ, ‘ಇಂಧನ ಮತ್ತು ಶಕ್ತಿ’ಹಣದುಬ್ಬರವು ಕಳೆದ ಬಾರಿಗಿಂತ ಏರಿಕೆಯಾಗಿದೆ. ಕಳೆದ ಸಾಲಿನಲ್ಲಿ ಶೇ.7.14 ಇದ್ದ ಹಣದುಬ್ಬರ ಪ್ರಮಾಣ ಈ ಬಾರಿ ಶೇ.  7.96ಕ್ಕೆ ತಲುಪಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ