ಲೋಕಸಭಾ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ ವಿಧಿವಶ

ಕೋಲ್ಕತ್ತಾ: ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಚಿಕಿತ್ಸೆ ಫಲಕಾರಿಯಾಗದೇ ತಮ್ಮ 89 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಚಟರ್ಜಿ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಆಗಸ್ಟ್​ 10ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವೆಂಟಿಲೇಟರ್​ ಸಹಾಯದಿಂದ ಕೃತಕ ಉಸಿರಾಟ ನಡೆಸುತ್ತಿದ್ದರು. ಅವರಿಗೆ ನಿರಂತರವಾಗಿ ಡಯಾಲಿಸಿಸ್ ಮಾಡಲಾಗುತ್ತಿತ್ತು. ಸುಮಾರು 12 ವೈದ್ಯರ ತಂಡ ಚಟರ್ಜಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಜುಲೈ ತಿಂಗಳಲ್ಲಿ  ಹೆಮೋರ್ಹಾಗಿಕ್ ಸ್ಟ್ರೋಕ್​ ಉಂಟಾಗಿದ್ದು, ಅದಕ್ಕೆ ಚಿಕಿತ್ಸೆ ಪಡೆದಿದ್ದರು.

ಹತ್ತು ಬಾರಿ ಲೋಕಸಭೆಯ ಸಂಸದರಾಗಿ ಆಯ್ಕೆಯಾಗಿದ್ದ ಸೋಮನಾಥ ಚಟರ್ಜಿ 2004ರಿಂದ 2009ರವರೆಗೆ ಲೋಕಸಭೆಯ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು.

ಇಂಡೋ ಅಮೆರಿಕಾದ ನ್ಯೂಕ್ಲಿಯರ್ ಒಪ್ಪಂದ ವಿಚಾರದಲ್ಲಿ ಕಮ್ಯುನಿಸ್ಟ್​ ಪಾರ್ಟಿಯು ಕಾಂಗ್ರೆಸ್​ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಸಂದರ್ಭದಲ್ಲಿ ಅದನ್ನು ನಿರಾಕರಿಸಿದ ಕಾರಣ ಅವರು ರಾಜಕಾರಣದಿಂದಲೇ ತೆರೆಮರೆಗೆ ಸರಿಯಬೇಕಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ