ಬೆಂಗಳೂರು, ಆ.13-ಭಾರತದಲ್ಲಿ ಅಂಗಾಂಗಗಳ ಕೊರತೆಯಿದ್ದು, ಸಕಾಲದಲ್ಲಿ ಅಂಗಾಂಗಗಳು ದೊರೆಯದೆ ರೋಗಿಗಳು ಮೃತಪಡುತ್ತಿದ್ದಾರೆ ಎಂದು ಶಂಕರ ಕಣ್ಣಿನ ಆಸ್ಪತ್ರೆಯ ಡಾ.ಆನಂದ್ ಬಾಲಸುಬ್ರಹ್ಮಣ್ಯಂ ತಿಳಿಸಿದರು.
ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ವಿವಿಧ ಆಸ್ಪತ್ರೆಗಳ ಸಹಯೋಗದೊಂದಿಗೆ ಇಂದು ಪ್ರೆಸ್ಕ್ಲಬ್ ಸಭಾಂಗಣದಲ್ಲಿ ಅಂಗದ ಉಡುಗೊರೆ ಎಂಬ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಒಬ್ಬ ಮಿದುಳು ನಿಷ್ಕ್ರಿಯವಾದ ವ್ಯಕ್ತಿಯ ಅಂಗಗಳು, ಅಂಗಾಂಗ ವೈಫಲ್ಯದಿಂದ ಬಳಲುತ್ತಿರುವ 9 ರೋಗಿಗಳಿಗೆ ಮರು ಜನ್ಮ ನೀಡಬಹುದಾಗಿದೆ ಎಂದು ತಿಳಿಸಿದರು.
ಅಂಧತ್ವವನ್ನು ಪವಾಡಗಳಿಂದ ಗುಣಪಡಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಂಗದ ಉಡುಗೊರೆ ಎಂಬ ಅಭಿಯಾನ ಕೈಗೊಂಡಿದ್ದು, ಪ್ರತಿಯೊಬ್ಬರಲ್ಲೂ ಕಾರ್ಯಕ್ರಮದ ಅರಿವು ಮೂಡಿಸಲಾಗುವುದು ಮತ್ತು ಕಾರ್ನಿಯಾದ ಲೋಪದಿಂದ ಸಂಪೂರ್ಣ ಅಂಧರಾಗಿರುವ ಸುಮಾರು ಒಂದು ಮಿಲಿಯನ್ ಜನರ ಸಮಸ್ಯೆಯನ್ನು ನೀಗಿಸೋಣ ಎಂದರು.
ನಮ್ಮೊಂದಿಗೆ ಯಂಗ್ ಇಂಡಿಯಾ, ಸಿಐಐ ಮತ್ತು ಇತರೆ ಆಸ್ಪತ್ರೆಗಳು ನಮ್ಮೊಂದಿಗೆ ಈ ಕಾರ್ಯದಲ್ಲಿ ಕೈ ಜೋಡಿಸಿದೆ ಎಂದು ತಿಳಿಸಿದರು.