ಬ್ಯಾಟ್ಸ್‌ಮನ್‌ಗೆ ಮಧ್ಯದ ಬೆರಳು ತೋರಿಸಿ ವಿಕೃತಿ ಮೆರೆದ ಪಾಕ್ ಕ್ರಿಕೆಟಿಗ, ವಿಡಿಯೋ ವೈರಲ್!

ಕೆರಿಬಿಯನ್ ಪ್ರಿಮಿಯರ್ ಲೀಗ್(ಸಿಪಿಎಲ್) 2018ರ ಟೂರ್ನಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಪರ ಆಡುತ್ತಿರುವ ಸೋಹೈಲ್ ತನ್ವೀರ್ ಎದುರಾಳಿ ತಂಡದ ಬ್ಯಾಟ್ಸ್ ಮನ್ ಬೆನ್ ಕಟ್ಟಿಂಗ್ ಅವರಿಗೆ ಎರಡೂ ಕೈಯಲ್ಲಿನ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದಿದ್ದಾರೆ.
ಬೆನ್ ಕಟ್ಟಿಂಗ್ ಔಟ್ ಆಗುವುದಕ್ಕೂ ಮುನ್ನ ಸಿಕ್ಸರ್ ಬಾರಿಸಿದ್ದರು. ಇದರಿಂದ ಆವೇಗದಲ್ಲಿದ್ದ ಸೋಹೈಲ್ ತನ್ವೀರ್ ನಂತರದ ಎಸೆತದಲ್ಲಿ ಬೆನ್ ರನ್ನು ಬೌಲ್ಡ್ ಮಾಡಿದ್ದರು. ಔಟ್ ಆದ ತಕ್ಷಣ ಬೆನ್ ತಲೆ ಬಗ್ಗಿಸಿಕೊಂಡು ನಡೆದುಕೊಂಡು ಹೋಗುತ್ತಿದ್ದರು. ಈ ಮಧ್ಯೆ ವಿಕೆಟ್ ಪಡೆದ ಖುಷಿಯಲ್ಲಿದ್ದ ಸೋಹೈಲ್ ಕೈಯಲ್ಲಿನ ಮಧ್ಯದ ಬೆರಳಲನ್ನು ತೋರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.

ಸೋಹೈಲ್ ರ ಈ ವರ್ತನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕ್ರೀಡಾಸ್ಫೂರ್ತಿ ಮೆರತು ಕುಚೇಷ್ಟೆ ಮಾಡಿದ ಆಟಗಾರನನ್ನು ಟೀಕಿಸುತ್ತಿದ್ದಾರೆ.
ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಕ್ರಿಸ್ ಗೇಯ್ಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ದು 65 ಎಸೆತಗಳಲ್ಲಿ 86 ರನ್ ಗಳಿಸಿದ್ದರು. ಹೀಗಿದ್ದರು ತಂಡ 146 ರನ್ ಪೇರಿಸಿತ್ತು. 147 ರನ್ ಗುರಿ ಬೆನ್ನಟ್ಟಿದ ಗಯಾನ 16.3 ಓವರ್ ನಲ್ಲಿ 148 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ