ದೇಹದಾಢ್ರ್ಯ ಸ್ಫರ್ಧೆಗೆ ಐಎನ್‍ಬಿಎ ಇಂಡಿಯಾಗೆ ಚಾಲನೆ

Varta Mitra News

 

ಬೆಂಗಳೂರು,ಆ.12- ಉತ್ತಮ ದೇಹದಾಢ್ರ್ಯ ಸ್ಫರ್ಧೆ ನಡೆಸಲು ಐಎನ್‍ಬಿಎ ಇಂಡಿಯಾಗೆ ಇಂದು ಚಾಲನೆ ನೀಡಲಾಯಿತು.
ನಗರದಾದ್ಯಂತ ಜಿಮ್‍ಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದರಿಂದ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳನ್ನು ನಡೆಸಲು ಅಪಾರ ಉತ್ಸಾಹವೂ ಇದೆ. ಆದರೆ ಬಹಳಷ್ಟು ದೇಹದಾಢ್ರ್ಯ ಸ್ಪರ್ಧೆಗ:ಳು ಎಲ್ಲೆಂದರಲ್ಲಿ ನಡೆಯುತ್ತಿದ್ದರೂ ಅವುಗಳು ಜನರನ್ನು ಗಮನ ಸೆಳೆಯುವಂತಹ ಸ್ಥಳಗಳಲ್ಲಿಯಾಗಲಿ, ಸೂಕ್ತ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ ದೇಹದಾಢ್ರ್ಯ ಪಟುಗಳ ಪ್ರಯತ್ನಗಳನ್ನು ಅತ್ಯುತ್ತಮ ರೀತಿಯಲ್ಲಿ ಪ್ರತಿಫಲಿಸುವ ನಿಟ್ಟಿನಲ್ಲಿ ಶ್ರೇಷ್ಠ ಸ್ಪರ್ಧೆಗಳನ್ನು ನಡೆಸಲು (ಐನ್‍ಬಿಎ-ಇಂಡಿಯಾ)ಗೆ ಚಾಲನೆ ನೀಡಲಾಗಿದೆ.
ಐಎನ್‍ಬಿಎ ಇದು ಕ್ರೀಡಾಪಟುಗಳಿಗೆ ಪ್ರಥಮ ಆದ್ಯತೆ ನೀಡುತ್ತದೆ. ನೈಸರ್ಗಿಕ ದೇಹದಾಢ್ರ್ಯದ ಸಂಸ್ಕøತಿಯನ್ನು ಬೆಳೆಸುವ ಉದ್ದೇಶ ಹೊಂದಿದೆ. ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಹದಾಢ್ರ್ಯ ಸಂಸ್ಥೆಯಾಗಿದೆ. ಪಾರದರ್ಶಕ ತೀರ್ಪು ನೀಡುವುದಲ್ಲದೆ ಅಭ್ಯರ್ಥಿಗಳಿಗೆ ಅಂತಾರಾಷ್ಟ್ರೀಯ ಅವಕಾಶಗಳ ಸೃಷ್ಟಿ, ಉತ್ತಮ ಗುಣಮಟ್ಟದ ನಿಧಿಯನ್ನು ಸಂಗ್ರಹಿಸುತ್ತದೆ. ಪ್ರಸ್ತುತ ವ್ಯವಸ್ಥೆ ಕ್ರೀಡಾಪಟುಗಳ ಕಲ್ಯಾಣಕ್ಕೆ ಉತ್ತಮ ಕೆಲಸ ಸಾಧ್ಯವಾಗುತ್ತದೆ. ಪೂರ್ವಾಗ್ರಹ ರಹಿತ ತೀರ್ಪುಗಾರಿಕೆ ಅಲ್ಲದೆ ಕ್ರೀಡಾಪಟುಗಳಿಗೆ ಉತ್ತಮ ಸೌಲಭ್ಯ ಒದಗಿಸುತ್ತದೆ.
ಶ್ರೇಷ್ಠ ಗುಣಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳು
ಐಎನ್‍ಬಿಎ-ಇಂಡಿಯಾ ಭಾರತದಾದ್ಯಂತ ಗುಣಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳ ಸರಣಿ ಆಯೋಜಿಸಲಿದೆ ಮತ್ತು ಕ್ರೀಡಾಪಟುಗಳಿಗೆ ವೇದಿಕೆ ಸೃಷ್ಟಿಸಲಿದೆ.ಆಗ ಕ್ರೀಡಾಪಟುಗಳು ಇತರೆ ಒತ್ತಡಗಳಿಂದ ಮುಕ್ತರಾಗಿ ದೇಹದಾಢ್ರ್ಯತೆಗೆ ಗಮನ ನೀಡಬಹುದು ಎಂದು ಐಎನ್‍ಬಿಎ-ಇಂಡಿಯಾ ಅಧ್ಯಕ್ಷ ರಘುನಂದನ್ ಹೇಳಿದರು.
ಬೆಂಗಳೂರಿನಲ್ಲಿಂದು ಐಎನ್‍ಬಿಎ ಇಂಡಿಯಾ ಶಾಖೆ ಆರಂಭಿಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ