ಗಿರಿಗುಚ್ಛ ಲೋಕಾರ್ಪಣೆ

ಬೆಂಗಳೂರು, ಆ. 13- ಕನ್ನಡದ ಶ್ರೇಷ್ಠ ಕವಿಗಳೆನಿಸಿರುವ ಕುವೆಂಪು ಮತ್ತು ಬೇಂದ್ರೆ ಅವರು ಕಾವ್ಯ,ಗದ್ಯ, ಕವನ ಬರೆಯುವುದಕ್ಕಾಗಿಯೇ ಹುಟ್ಟಿದವರು ಎಂದು ಸಾಹಿತಿ ಡಾ.ದೊಡ್ಡರಂಗೇಗೌಡರು ಅಭಿಪ್ರಾಯಪಟ್ಟರು.
ರವಿ ಕಿರಣ ಸಾಹಿತ್ಯ ಪ್ರತಿಷ್ಠಾನ ಹಾಗೂ ಭಾವಯಾನ ಪ್ರತಿಷ್ಠಾನ ವೇದಿಕೆ ಸಹಯೋಗದೊಂದಿಗೆ ಆಯೋಜಿಸಿದ್ದ ಕುಮಾರಿ ಕೆ.ಗಿರಿಜಾ ಅವರ ಚೊಚ್ಚಲ ಕವನ ಸಂಕಲನ ಗಿರಿಗುಚ್ಛ ಲೋಕಾರ್ಪಣೆ ಮಾಡಿ ಮಾತನಾಡಿದರು.
ಎಲ್ಲಾ ದೇಶಗಳಲ್ಲಿ ಕವಿಗಳಿಗೆ ವಿಶೇಷ ಸ್ಥಾನವಿದೆ. ಒಂದು ಕಾವ್ಯವನ್ನು ಬರೆಯಬೇಕಾದರೆ ಇನ್ನೊಬ್ಬರ ಕಾವ್ಯವನ್ನು ಗಂಭೀರವಾಗಿ ಅರ್ಥ ಮಾಡಿಕೊಂಡು ಶ್ರದ್ಧೆಯಿಂದ ಬರೆಯುವ ಆಸಕ್ತಿಯನ್ನು ಹೊಂದಿರಬೇಕು. ಮೊದಲನೇ ಸಾಲು ಬರೆಯುವಾಗ ಎಚ್ಚರಿಕೆಯಿಂದ ಇರಬೇಕು. ಮೊದಲನೆ ಸಾಲು ಕಠಿಣವಾಗಿದ್ದರೆ ಓದುಗರ ಕೋಮಲವಾದ ಮನಸ್ಸಿಗೆ ಆಘಾತವನ್ನು ಉಂಟು ಮಾಡುತ್ತದೆ ಎಂದು ವಿಶ್ಲೇಷಿಸಿದರು.
ಯಾವ ಕವಿಯಾದರೂ ಸಹ ಪರಿಸರ, ಪ್ರೀತಿ, ತಾಯಿಯ ಮಮತೆಯ ಬಗ್ಗೆ ಕವನ ರಚಿಸಿರುತ್ತಾರೆ. ಅದೇ ರೀತಿ ಗಿರಿಜಾ ಅವರ ಕವನ ಸಂಕಲನವು ಪ್ರೀತಿ, ತಾಯಿ, ಸಾಧಕರ ಬಗ್ಗೆ ಒಳಗೊಂಡಿದೆ. ಪ್ರೀತಿ ಎಂದರೆ ಎರಡು ಮನಸ್ಸುಗಳ ಸಂಬಂಧವಾಗಿರಬೇಕು ಎಂದು ತಿಳಿಸಿದರು.
ಗಿರಿಜಾ ಅವರು ಇನ್ನಷ್ಟು ಕವನಗಳನ್ನು ಬರೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಸಾಹಿತಿ ಜಿ.ಆರ್.ಸುಬ್ರಹ್ಮಣ್ಯ ಕವಯಿತ್ರಿ ಪದ್ಮಾವತಿ ಚಂದ್ರು ಸೇರಿದಂತೆ ಮತ್ತಿತರರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ