
ಹೊಸದಿಲ್ಲಿ: ಕಮಿಟಿಯ ಶಿಫಾರಸ್ಸು ಪರಿಶೀಲನೆ ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ತನ್ನ ನಿರ್ಧಾರಗಳನ್ನ ತಿಳಿಸಿದೆ. ಸಮಿತಿಯ ಶಿಫಾರಸ್ಸಿನಲ್ಲಿ ಕೆಲ ಕಠಿಣ ನಿಯಮಗಳನ್ನ ಸಡಿಲಗೊಳಿಸಿದ್ದು, ಬಿಸಿಸಿಐ ಅಧಿಕಾರಿಗಳಿಗೆ ಖುಷಿ ತಂದಿದೆ. ಅದರೊಟ್ಟಿಗೆ ಮಾಜಿ ಕ್ರಿಕೆಟರ್ ಸೌರವ್ ಗಂಗೂಲಿ ಅವರಿಗೂ ಮುಂದೆ ಬಿಸಿಸಿಐ ಅಧ್ಯಕ್ಷ ಹುದ್ದೆಗೇರಲು ಅಡ್ಡಿಯಾಗಿದ್ದ ನಿಯಮವೊಂದು ಇದೀಗ ದೂರವಾಗಿದೆ.
ಲೋಧಾ ಸಮಿತಿಯ ಶಿಫಾರಸ್ಸಿನಂತೆ, ಒಬ್ಬ ಆಡಳಿತಾಧಿಕಾರಿ ನಿರಂತರವಾಗಿ ಮೂರು ಬಾರಿ ಅಧಿಕಾರದಲ್ಲಿ ಇರದಂತೆ ನೋಡಿಕೊಳ್ಳಲಾಗಿತ್ತು. ಆದ್ರೆ, ಸಮಿತಿಯ ಈ ಶಿಫಾರಸ್ಸನ್ನ ಕೋರ್ಟ್ ತಳ್ಳಿ ಹಾಕಿದೆ. ಆದ್ದರಿಂದ, ಈಗಾಗಲೇ ಬೆಂಗಾಲ್ ಕ್ರಿಕೆಟ್ ಬೋರ್ಡ್ನ ಪ್ರೆಸಿಡೆಂಟ್ ಆಗಿ ಎರಡು ಬಾರಿ ಅಧಿಕಾರ ನಡೆಸಿರುವ ಸೌರವ್ ಗಂಗೂಲಿ, ಇದೀಗ ಬಿಸಿಸಿಐ ಅಧ್ಯಕ್ಷರಾಗಲು ಉತ್ತಮ ಅಭ್ಯರ್ಥಿ ಅಂತ ಪರಿಗಣಿಸಲಾಗಿದೆ. ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಲು ಎಲ್ಲಾ ರೀತಿಯ ಅರ್ಹತೆಗಳನ್ನ ಪಡೆದಿದ್ದಾರೆ ಎಂಬ ಮಾತು ಬಿಸಿಸಿಐ ಹಿರಿಯರ ವಲಯದಲ್ಲಿ ಕೇಳಿಬರ್ತಿದೆ.