ಇಪ್ಪತ್ತು ರೂಪಾಯಿ ಆಸೆಗಾಗಿ ವ್ಯಕ್ತಿಯೊಬ್ಬರು 2 ಲಕ್ಷ ರೂ.ಕಳೆದುಕೊಂಡ

 

ಬೆಂಗಳೂರು, ಆ.11- ಇಪ್ಪತ್ತು ರೂಪಾಯಿ ಆಸೆಗಾಗಿ ವ್ಯಕ್ತಿಯೊಬ್ಬರು 2 ಲಕ್ಷ ರೂ.ಕಳೆದುಕೊಂಡ ಘಟನೆ ನಿನ್ನೆ ಹಾಡುಹಗಲೇ ಕೊಡಿಗೇಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಮೃತಹಳ್ಳಿ ನಿವಾಸಿ ನಂಜುಂಡಸ್ವಾಮಿ ಹಣ ಕಳೆದುಕೊಂಡವರು. ಅವರು ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಸಹಕಾರ ನಗರದ ಎ ಬ್ಲಾಕ್‍ನಲ್ಲಿರುವ ಕೆನರಾ ಬ್ಯಾಂಕ್‍ಗೆ ಹೋಗಿ 2 ಲಕ್ಷ ರೂ. ಡ್ರಾ ಮಾಡಿದ್ದಾರೆ.
ಹಣವನ್ನು ತನ್ನ ಸ್ಕೂಟರ್‍ನ ಡಿಕ್ಕಿಯಲ್ಲಿ ಇಟ್ಟು ಸ್ನೇಹಿತನನ್ನು ನೋಡಲು ಅದೇ ವಾಹನದಲ್ಲಿ ಹೋಗುತ್ತಿದ್ದಾಗ ಸಹಕಾರ ನಗರದ ಗಣೇಶ ದೇವಸ್ಥಾನದ ಬಳಿ ಹಿಂದಿನಿಂದ ಬಂದ ಬೈಕ್ ಸವಾರನೊಬ್ಬ 10 ರೂಪಾಯಿ ಎರಡು ನೋಟುಗಳನ್ನು ರಸ್ತೆಯ ಮೇಲೆ ಎಸೆದು ನಿಮ್ಮ ಹಣ ಬಿದ್ದಿದೆ ಎಂದು ಹೇಳಿದ್ದಾನೆ.
ತಕ್ಷಣ ಸ್ಕೂಟರ್ ನಿಲಿಸಿದ ನಂಜುಂಡೇಸ್ವಾಮಿ ಅವರು ಹಣ ಎತ್ತಿಕೊಳ್ಳಲು ಹೋಗಿದ್ದಾರೆ. ಅವರು ಬರುವಷ್ಟರಲ್ಲಿ ಡಿಕ್ಕಿಯಲ್ಲಿದ್ದ 2 ಲಕ್ಷ ರೂ. ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ. 20 ರೂ.ಎತ್ತಿಕೊಂಡು ಬಂದು ನೋಡಿದಾಗ ಡಿಕ್ಕಿಯಲ್ಲಿದ್ದ ಹಣ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಅವರು ಕೊಡಿಗೇಹಳ್ಳಿ ಪೆÇಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೆÇಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.
ನಗರದಲ್ಲಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಪೆÇಲೀಸರು ಈ ಬಗ್ಗೆ ಅರಿವು ಮೂಡಿಸುತ್ತಿದ್ದರೂ ಸಾರ್ವಜನಿಕರು ವಂಚನೆಗೆ ಒಳಗಾಗುತ್ತಿರುವುದು ಮಾತ್ರ ನಿಂತಿಲ್ಲ. ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ದೋಚುವ ತಂಡ ನಗರದಲ್ಲಿ ಸಕ್ರಿಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದು ಪೆÇಲೀಸರು ಸಾರ್ವಜನಿರಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ