ರೈಲಿಗೆ ಸಿಕ್ಕಿ ಸುಮಾರು 60 ವರ್ಷದ ವೃದ್ಧ ಸಾವು

 

ಬೆಂಗಳೂರು, ಆ.11-ರೈಲಿಗೆ ಸಿಕ್ಕಿ ಸುಮಾರು 60 ವರ್ಷದ ವೃದ್ಧ ಮೃತಪಟ್ಟಿದ್ದು, ಹೆಸರು-ವಿಳಾಸ ತಿಳಿದುಬಂದಿಲ್ಲ.
ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, 5.5 ಅಡಿ ಎತ್ತರ, ಅಗಲವಾದ ಹಣೆ, ಕಿವಿ ಹೊಂದಿರುವ ಈ ವೃದ್ಧನ ಮಾಹಿತಿ ಲಭ್ಯವಾಗಿಲ್ಲ.
ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದ ಸಮೀಪ ರಾತ್ರಿ ಈ ವೃದ್ಧ ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾರೆ.
ಮಾಸಲು ನೀಲಿ ಬಣ್ಣದ ಶರ್ಟ್, ನೀಲಿಬಣ್ಣದ ತುಂಬುತೋಳಿನ ಸ್ಪೆಟರ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ವ್ಯಕ್ತಿಯ ವಾರಸುದಾರರು ಕೂಡಲೇ ಯಶವಂತಪುರ ರೈಲ್ವೆ ಪೆÇಲೀಸರನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ