ಬೆಂಗಳೂರು,ಆ.11- ತುಮಕೂರಿನ ಅಮರೇಶ್ವರ ವಿಜಯ ನಾಟಕ ಮಂಡಳಿ 72ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇದೇ 14-15 ರಂದು ಕಾಮಾಕ್ಷಿಪಾಳ್ಯದ ವೃಷಭಾವತಿ ನಗರದ ಶ್ರೀ ರಾಘವೇಂದ್ರ ಪ್ರೌಢಶಾಲಾ ಆವರಣದಲ್ಲಿ ಅಮರ ರಂಗೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಅಂದು ಸಂಜೆ 6 ಗಂಟೆಗೆ ಗುರಾಜ್ ಶಾಸ್ತ್ರಿ ರಚನೆಯ, ಧನ್ವಂತ್ರಿ ನಿರ್ದೇಶನ, ಚಕ್ರಧರ-ಜಾನಪದ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರ. 7.30ಕ್ಕೆ ಯು.ಗೋವಿಂದೇಗೌಡ ರಚನೆ -ನಿರ್ದೇಶನ ಧನ್ವಂತ್ರಿಬಿ.ಎ ಅವರ ಸಹನಿರ್ದೇಶನದಲ್ಲಿ ಮಿ.ಡೂಪ್ಲಿಕೇಟ್-ಹಾಸ್ಯ ನಾಟಕವನ್ನು ಪ್ರದರ್ಶಿಸಲಾಗುತ್ತದೆ.
15ರಂದು ಬೆಳಗ್ಗೆ 8 ಗಂಟೆಗೆ ಸ್ವಾತಂತ್ರ್ಯೋತ್ಸವ ದಿನಾಚರಣೆ, ಉಪನ್ಯಾಸ, ಎರಡು ತಿಂಗಳ ರಂಗಶಿಕ್ಷಣ ಅಭಿಯಾನವನ್ನು ಯಶಸ್ವಿಯಾಗಿ ಪೂರೈಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಏರ್ಪಡಿಸಲಾಗಿದೆ.
ಕವಿ-ಕಥೆಗಾರ ರವಿ ವಿಠಲ ಅಲಬಾಳ ಅವರು ಉಪನ್ಯಾಸ ನೀಡಲಿದ್ದು, ಶ್ರೀ ರಾಘವೇಂದ್ರ ಪ್ರೌಢಶಾಲೆಯ ಕಾರ್ಯದರ್ಶಿ ಎಚ್.ಎಲ್.ನಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಂಡಳಿಯ ಅಧ್ಯಕ್ಷ ಚನ್ನಬಸಯ್ಯಗುಬ್ಬಿ ತಿಳಿಸಿದ್ದಾರೆ.