ನೀರವ್ ಮೋದಿ ಸಹೋದರ-ಸಹೋದರಿಗೆ ಸಾರ್ವಜನಿಕ ನೋಟೀಸ್

ನವದೆಹಲಿ:ಆ-11: ಪಿಎನ್ ಬಿ ವಂಚನೆ ಪ್ರಕರಣದ ಉದ್ಯಮಿ ನೀರವ್ ಮೋದಿ ಸೋದರ ಮತ್ತು ಸೋದರಿಗೆ ಮುಂಬೈಯ ವಿಶೇಷ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆ ನ್ಯಾಯಾಲಯ ಸಾರ್ವಜನಿಕ ಸಮ್ಮನ್ಸ್ ಜಾರಿ ಮಾಡಿದೆ.

ಸುಮಾರು 2 ಶತಕೋಟಿ ಡಾಲರ್ ರೂಪಾಯಿ ಬ್ಯಾಂಕ್ ವಂಚನೆಯ ಪ್ರಮುಖ ಆರೋಪಿಯಾಗಿರುವ ನೀರವ್ ಮೋದಿ ಕುಟುಂಬದವರಿಗೆ ಸಮ್ಮನ್ಸ್ ಜಾರಿ ಮಾಡಿರುವ ನ್ಯಾಯಾಲಯ ಸೆಪ್ಟೆಂಬರ್ 25ಕ್ಕೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.

ಒಂದು ವೇಳೆ ವಿಚಾರಣೆಗೆ ಹಾಜರಾಗುವಲ್ಲಿ ವಿಫಲವಾದರೆ ಅವರ ಆಸ್ತಿಯನ್ನು ಆರ್ಥಿಕ ಅಪರಾಧ ತಡೆಗಟ್ಟುವ ಕಾಯ್ದೆಯಡಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಮುಂಬೈಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ತಡೆಗಟ್ಟುವ ನ್ಯಾಯಾಲಯ, ಪ್ರಮುಖ ದಿನಪತ್ರಿಕೆಗಳಲ್ಲಿ ಮೂರು ಸಾರ್ವಜನಿಕ ನೊಟೀಸ್ ಗಳನ್ನು ಜಾರಿ ಮಾಡಿದೆ. ಅದರಲ್ಲಿ ನೀರವ್ ಮೋದಿಯವರ ಸೋದರಿ ಪುರ್ವಿ ಮೋದಿ ಮತ್ತು ಸೋದರ ನೀಶಲ್ ಮೋದಿ ಅವರ ಹೆಸರುಗಳನ್ನು ಪ್ರಸ್ತಾಪಿಸಲಾಗಿದೆ. ನೀರವ್ ಮೋದಿಯ ಅಕ್ರಮ ವ್ಯವಹಾರ ಬೆಳಕಿಗೆ ಬರುತ್ತಿದ್ದಂತೆ ಇವರು ಸಹ ದೇಶ ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗಿದೆ.

ಸೆಪ್ಟೆಂಬರ್ 25ರಂದು ವಿಚಾರಣೆಗೆ ನೀರವ್ ಮೋದಿಯನ್ನು ಸಹ ದೇಶಭ್ರಷ್ಟ ಆರ್ಥಿಕ ಅಪರಾಧಗಳ ಕಾಯ್ದೆಯಡಿ ವಿಚಾರಣೆಗೆ ಕರೆಯಲಾಗಿದೆ.

Court issues public notices,appearance against Nirav Modi, family under fugitive Act

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ