ಪಾರ್ಕರ್‌ ಸೋಲಾರ್‌ ಪ್ರೋಬ್‌ ಉಡಾವಣೆ ಮುಂದೂಡಿದ ನಾಸಾ

ನಾಸಾ: ಆ-11: ಸೂರ್ಯನ ಹೊರಗಿನ ಮೇಲ್ಮೈ ಪ್ರದೇಶದ ಅಧ್ಯಯನಕ್ಕೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಮಹತ್ವಾಕಾಂಕ್ಷೆಯ ‘ಪಾರ್ಕರ್‌ ಸೋಲಾರ್‌ ಪ್ರೋಬ್‌ (ಪಿಎಸ್‌ಪಿ)’ ಬಾಹ್ಯಾಕಾಶ ರೋಬೊ ನೌಕೆಯ ಉಡಾವಣೆಯನ್ನು ಮುಂದೂಡಿದೆ.

ಉಡಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ನಾಸಾ ಉಡಾವಣೆಯ ಕಾರ್ಯಗಳನ್ನು ಆ.10ರಂದು(ಶುಕ್ರವಾರ)ಆರಂಭಿಸಿತ್ತು. ನೌಕೆಯನ್ನು ಹೊತ್ತೊಯ್ಯುವ ಉಡಾವಣಾ ವಾಹಕ ನೆಲದಿಂದ ಚಿಮ್ಮಲು ಸಿದ್ಧವಾಗಿತ್ತು. ಇಂದು ಬೆಳಿಗ್ಗೆ 3.33ಕ್ಕೆ(ಸ್ಥಳೀಯ ಕಾಲಮಾನ) (ಭಾರತೀಯ ಕಾಲಮಾನ ಮಧ್ಯಾಹ್ನ 1.3ಕ್ಕೆ) ಉಡಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಬಳಿಕ ಸಮವನ್ನು ಬದಲಾಯಿಸಿ ಸ್ಥಳೀಯ ಕಾಲಮಾನ 4.28ಕ್ಕೆ(ಭಾರತೀಯ ಕಾಲಮಾನ 2.8ಕ್ಕೆ) ನಿಗಧಿ ಮಾಡಿತು. ಅದಾದ ಬಳಿಕ ಉಡಾವಣೆಯನ್ನು ರದ್ದುಪಡಿಸಿ, ಭಾನುವಾರ ಬೆಳಿಗ್ಗೆ ಉಡಾವಣೆ ಮಾಡಲಾಗುವುದು. ಉಡಾವಣಾ ಸಮಯವನ್ನು ತಿಳಿಸಲಾಗುವುದು ಎಂದು ನಾಸಾ ಟ್ವಿಟ್‌ ಮಾಡಿದೆ.

NASA, postpones launch of probe,study sun at close range

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ